ವರಿಷ್ಠರು ಅನುಮತಿ ನೀಡಿರುವುದಕ್ಕಾಗೇ ಕೇಂದ್ರ ಸಚಿವರು ನಮ್ಮ ಹೋರಾಟದಲ್ಲಿ ಭಾಗಿ: ಯತ್ನಾಳ್
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹ 187 ಕೋಟಿ ಅವ್ಯವಹಾರ ನಡೆದಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ₹87 ಕೋಟಿ ಅವ್ಯವಹಾರ ನಡೆದಿದೆಯೆಂದು ಸದನದಲ್ಲಿ ಅಂಗೀಕರಿಸಿದ್ದಾರೆ, ಈ ಹಗರಣದ ವಿರುದ್ಧ ನಾವು ಉತ್ತರ ಕರ್ನಾಟಕ ಭಾಗದಲ್ಲಿ ಪಾದಯಾತ್ರೆ ನಡೆಸಬೇಕೆಂದುಕೊಂಡಿದ್ದೆವು, ಅದರೆ ನಮಗೆ ಅನುಮತಿ ನಿರಾಕರಿಸಲಾಯಿತು ಎಂದು ಯತ್ನಾಳ್ ಹೇಳಿದರು.
ರಾಯಚೂರು: ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ರಾಯಚೂರು ತಲುಪಿದೆ. ಹೋರಾಟಕ್ಕಾಗಿ ವರಿಷ್ಠರು ಅನುಮತಿ ಪಡೆದಿಲ್ಲ ಎಂಬ ಅರೋಪಕ್ಕೆ ಉತ್ತರ ನೀಡಿದ ಯತ್ನಾಳ್, ರಾಷ್ಟ್ರೀಯ ನಾಯಕರು ಅನುಮತಿ ನೀಡಿರುವ ಕಾರಣಕ್ಕಾಗೇ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಪ್ರಲ್ಹಾದ್ ಜೋಶಿಯವರು ನಮ್ಮೊಂದಿಗೆ ಕೈ ಜೋಡಿಸಿದರು, ಜೆಪಿಸಿ ಯ ಚೇರ್ಮನ್ ವಿಶೇಷ ಹೆಲಿಕಾಪ್ಟರ್ನಲ್ಲಿ ಬಂದು ನಮ್ಮ ಮನವಿ ಸ್ವೀಕರಿಸಿದರು, ರಾಜ್ಯದ ನಾಯಕರೂ ನಮಗೆ ಬೆಂಬಲ ನೀಡಿದ್ದಾರೆ, ಅಷ್ಟಾಗಿಯೂ ಅವರು ನಮ್ಮ ಹೋರಾಟದ ವಿರುದ್ಧ ಹೈಕಮಾಂಡ್ಗೆ ದೂರು ಸಲ್ಲಿಸುತ್ತಾರೆಂದರೆ ಹಾಗೆ ಮಾಡಲು ಅವರು ಮುಕ್ತರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾರ್ಯಕರ್ತರಿಗೆ ಹೊಸ ಸಂದೇಶ: ವಿಜಯೇಂದ್ರಗೆ ಮತ್ತೊಂದು ಶಾಕ್ ಕೊಟ್ಟ ಯತ್ನಾಳ್