ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಆತಂಕ ದೂರ ಮಾಡಿ, ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ಸೂಪರ್ ​ಹೀರೊಗಳು!
Hospital

ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಆತಂಕ ದೂರ ಮಾಡಿ, ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ಸೂಪರ್ ​ಹೀರೊಗಳು!

| Updated By: Digi Tech Desk

Updated on: Jul 20, 2021 | 4:42 PM

ಕೆನಡಾದಲ್ಲರುವ ಒಂದು ಮಕ್ಕಳ ಅಸ್ಪತ್ರೆ ತನ್ನಲ್ಲಿ ಇನ್​ಪೇಶಂಟ್​ಗಳಾಗಿದ್ದ ಮಕ್ಕಳನ್ನು ಗೆಲುವಾಗಿಸಲು, ಧೈರ್ಯ ತುಂಬಲು ಒಂದು ಅಪೂರ್ವ ಪ್ರಯತ್ನ ಮಾಡಿದೆ. ಕಿಂಗಸ್ಟನ್ ಜನರಲ್ ಆಸ್ಪತ್ರೆಯ ಮಕ್ಕಳ ರೋಗ ವಿಭಾಗವು ಆಸ್ಪತ್ರೆಯಲ್ಲಿ ಶುಶ್ರೂಷೆಗೆ ದಾಖಲಾಗಿದ್ದ ಮಕ್ಕಳರೆದುರು, ಅವರ ನೆಚ್ಚಿನ ಸೂಪರ್​ ಹೀರೊಗಳು ಪ್ರತ್ಯಕ್ಷರಾಗುವಂತೆ ಮಾಡಿ ಅವರನ್ನು ಚೀರ್​ ಅಪ್​ ಮಾಡಿದ್ದಾರೆ.

ಆಸ್ಪತ್ರೆ ವಾಸ ಯಾರಿಗೆ ತಾನೆ ಇಷ್ಟವಾದೀತು? ಇಂಜೆಕ್ಷನ್​ ಚುಚ್ಚಲು ಸಿರಿಂಜ್ ಮತ್ತು ಮಾತ್ರೆಗಳನ್ನು ಹಿಡಿದುಕೊಂಡು ಬರುವ ಬಿಳಿಯುಡುಗೆಯ ನರ್ಸ್​ಗಳು,ದೇಹದ ಮೇಲೆ ಏಪ್ರನ್ ಧರಿಸಿ ಹಾರದ ಹಾಗೆ ಕುತ್ತಿಗೆಗೆ ಸ್ಟೆತ್ ಬಿಗಿದು ಬರುವ ವೈದ್ಯರ ದೃಶ್ಯ ಬೆಡ್​ ಮೇಲೆ ಮಲಗಿರುವ ರೋಗಿಗೆ ಯಾವತ್ತೂ ಅಪ್ಯಾಯಯವೆನಿಸದು. ರೋಗಿ ಚಿಕ್ಕ ಮಗುವಾಗಿದ್ದರೆ ಅದರಲ್ಲಿ ಆತಂಕ ಮನೆಮಾಡೋದ ಸಹಜವೇ. ಯಾವಾಗ ಗುಣಮುಖನಾಗಿ ಮನೆಗೆ ಹೋದೇನು ಅಂತ ಮಗು ಅಂದುಕೊಳ್ಳುತ್ತಿರುತ್ತದೆ, ಮಕ್ಕಳಲ್ಲಿರುವ ಆತಂಕವನ್ನು ದೂರ ಮಾಡಲು ಆಸ್ಪತ್ರೆಯ ವೈದ್ಯರು, ನರ್ಸ್​ಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಾರೆ. ಆದರೆ ಕೆನಡಾದಲ್ಲರುವ ಒಂದು ಮಕ್ಕಳ ಅಸ್ಪತ್ರೆ ತನ್ನಲ್ಲಿ ಇನ್​ಪೇಶಂಟ್​ಗಳಾಗಿದ್ದ ಮಕ್ಕಳನ್ನು ಗೆಲುವಾಗಿಸಲು, ಧೈರ್ಯ ತುಂಬಲು ಒಂದು ಅಪೂರ್ವ ಪ್ರಯತ್ನ ಮಾಡಿದೆ. ಕಿಂಗಸ್ಟನ್ ಜನರಲ್ ಆಸ್ಪತ್ರೆಯ ಮಕ್ಕಳ ರೋಗ ವಿಭಾಗವು ಆಸ್ಪತ್ರೆಯಲ್ಲಿ ಶುಶ್ರೂಷೆಗೆ ದಾಖಲಾಗಿದ್ದ ಮಕ್ಕಳರೆದುರು, ಅವರ ನೆಚ್ಚಿನ ಸೂಪರ್​ ಹೀರೊಗಳು ಪ್ರತ್ಯಕ್ಷರಾಗುವಂತೆ ಮಾಡಿ ಅವರನ್ನು ಚೀರ್​ ಅಪ್​ ಮಾಡಿದ್ದಾರೆ.

ಟಿವಿ, ವಿಡಿಯೋ ಗೇಮ್ ಮತ್ತು ಕಾಮಿಕ್​ಗಳಲ್ಲಿ ಬರುವ ಸೂಪರ್ ಹೀರೋಗಳಾದ ಹಲ್ಕ್, ಐರನ್ ಮಾನ್ ಮತ್ತು ಇನ್ನೂ ಹಲವಾರು ಕ್ಯಾರೆಕ್ಟರ್​ಗಳಂತೆ ವೇಷ ಧರಿಸಿದ ಎಲೀಟ್ ವಿಂಡೋ ಕಂಪನಿಯ ಉದ್ಯೋಗಿಗಳು ರೂಫ್​ಗೆ ಕಟ್ಟಿದ ಹಗ್ಗದಿಂದ ಕಿಟಕಿಗಳ ಹತ್ತಿರ ನೇತಾಡುತ್ತಾ ಬಂದು ಮಕ್ಕಳಲ್ಲಿ ಸಂತೋಷ ಮತ್ತು ಆಶ್ಚರ್ಯ ಹುಟ್ಟಿಸಿದ್ದಾರೆ. ಅವರನ್ನು ನೋಡಿ ತಮ್ಮ ವಾರ್ಡ್​​ಗಳ ಬೆಡ್​ ಮೇಲೆ ಮಲಗಿದ್ದ ಮಕ್ಕಳು ಹೋ ಎಂದು ಚಿರುತ್ತಾ ಅವರನ್ನು ಗ್ರೀಟ್ ಮಾಡಿದ್ದಾರೆ. ಸದರಿ ಆಸ್ಪತ್ರೆಯು ಈ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಆಪಲೋಡ್ ಮಾಡಿದ್ದು ಅವು ವೈರಲ್ ಆಗಿವೆ,

ಆಸ್ಪತ್ರೆಯು ತನ್ನ ಟ್ವೀಟ್​ನಲ್ಲಿ, ‘ನಮ್ಮ ಹೆಲ್ತ್​ಕೇರ್​ ಸಿಬ್ಬಂದಿಗೆ ಇಂದು ಅಪೂರ್ವವಾದ ಬೆಂಬಲ ಸಿಕ್ಕಿತು- # ಸೂಪರ್​ಹೀರೊಗಳು ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. @EliteWindowC ಹಗ್ಗದ ಮೂಲಕ ಕಟ್ಟಡದ ಕೆಳಗಡೆ ಜಾರುತ್ತಾ ಕಿಟಕಿಗಳ ಮೇಲೆ ಕೊಳೆಯನ್ನು ಸ್ವಚ್ಛ ಮಾಡುವುದರ ಜೊತೆಗೆ; ಮಕ್ಕಳಿಗೆ, ಅವರ ಪೋಷಕರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಅತ್ಯಗತ್ಯವಾಗಿ ಬೇಕಿದ್ದ ಮೋಜು ಮತ್ತು ಚಿತ್ತಚಂಚಲತೆಯನ್ನು ಒದಗಿಸಿದರು,’ ಎಂದು ಹೇಳಿದೆ.

ಎಂಥ ಅದ್ಭುತ ಪರಿಕಲ್ಪನೆ ಅಲ್ಲವೇ?

ಇದನ್ನೂ ಓದಿ: Viral Video: ದೈತ್ಯಾಕಾರದ ಹುಲಿ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ‘ಹಲೋ ಬ್ರದರ್​’ ಎಂದ ವ್ಯಕ್ತಿ! ಹುಲಿಯ ರಿಯಾಕ್ಷನ್​ ಹೇಗಿದೆ ನೋಡಿ

 

Published on: Jul 20, 2021 04:26 PM