ಲಕ್ಷ್ಮಿ ಹೆಬ್ಬಾಳ್ಕರ್​ರನ್ನು ಬಾಗಿನ ನೀಡಿ ಸ್ವಾಗತಿಸಲು ಆಗಮಿಸಿದ ಚಿಕ್ಕಮಗಳೂರು ಬಿಜೆಪಿ ಮಹಿಳಾ ಕಾರ್ಯಕರ್ತೆಯರು

Updated on: May 24, 2025 | 12:32 PM

ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿರುವ ಬಿಜೆಪಿ ಕಾರ್ಯಾಕರ್ತೆಯೊಬ್ಬರು, ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ರವಿಯಣ್ಣನಿಗೆ ಬೆಳಗಾವಿಯಲ್ಲಿ ಮಾಡಿದ್ದನ್ನು ನೋಡಿದಾಗ ನಮ್ಮ ರಕ್ತ ಕುದ್ದಿದ್ದು ಸುಳ್ಳಲ್ಲ, ಅದರೆ ಚಿಕ್ಕಮಗಳೂರಿನ ಜನ ಸುಸಂಸ್ಕೃತರು ಮತ್ತು ಸಂಸ್ಕಾರವುಳ್ಳವರು, ನಾವು ಹಿಂದೆ ಹೇಳಿದಂತೆ ಸಚಿವೆಯವರನ್ನು ಬೋಕೆ ಮತ್ತು ಬಾಗಿನ ನೀಡಿ ಸ್ವಾಗತಿಸುತ್ತೇವೆಯೇ ಹೊರತು ಘೋಷಣೆಗಳನ್ನೇನೂ ಕೂಗಲ್ಲ ಎಂದು ಹೇಳಿದರು.

ಚಿಕ್ಕಮಗಳೂರು, ಮೇ 24: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ (CT Ravi) ನಡುವೆ ಇರುವ ಜಗಳ ಕನ್ನಡಿಗರೆಲ್ಲ ಗೊತ್ತಿದೆ. ರವಿಯವರು ಪರಿಷತ್ ನಲ್ಲಿ ಸಚಿವೆ ವಿರುದ್ಧ ಅವಾಚ್ಯ ಪದ ಬಳಸಿದರು ಎಂಬ ಆರೋಪದ ನಂತರ ಪೊಲೀಸರು ಅವರನ್ನು ಬಂಧಿಸಿ ರಾತ್ರಿಯೆಲ್ಲ ಸುತ್ತಾಡಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಲಕ್ಷ್ಮಿಯವರ ಬೆಂಬಲಿಗರು ರವಿಯವರನ್ನು ನಡೆಸಿಕೊಂಡ ರೀತಿ, ಕಾಂಗ್ರೆಸ್ ಕಾರ್ಯಕರ್ತರು ರವಿ ಮೇಲೆ ನಡೆಸಿದ ಹಲ್ಲೆ, ಅವರ ತಲೆಗಾದ ಗಾಯ, ಎಲ್ಲವನ್ನೂ ಜನ ನೋಡಿದ್ದಾರೆ. ಆದರೆ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತೆಯರು, ಸಚಿವೆ ತಮ್ಮ ನಗರಕ್ಕೆ ಬಂದಾಗ ಅವರ ಬೆಂಬಲಿಗರಂತೆ ನಡೆದುಕೊಳ್ಳದೆ, ಅವರನ್ನು ಭಾರತೀಯ ಸಂಸ್ಳೃತಿಯ ಪ್ರಕಾರ ಬಾಗಿನ ನೀಡಿ ಸ್ವಾಗತಿಸಲಾಗುವುದು ಎಂದಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ನಿನ್ನೆ ಚಿಕ್ಕಮಗಳೂರಿಗೆ ಬಂದು ಇಲ್ಲಿನ ಐಬಿಯಲ್ಲಿ ಉಳಿದುಕೊಂಡಿದ್ದಾರೆ. ಅದರೆ ಪೊಲೀಸರು ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಗೆ ಸಚಿವೆಯನ್ನು ಭೇಟಿಯಾಗಿ ಬಾಗಿನ ಮತ್ತು ಬೋಕೆ ನೀಡಲು ಬಿಡುತ್ತಿಲ್ಲ.

ಇದನ್ನೂ ಓದಿ: ಗ್ರೇಟರ್​ಗೆ ಕ್ವಾರ್ಟರ್ ಎನ್ನುವ ವಿಪಕ್ಷ ನಾಯಕ ಅಶೋಕ ಬುದ್ಧಿವಂತರು ಅನ್ಕೊಂಡಿದ್ದೆ: ಲಕ್ಷ್ಮಿ ಹೆಬ್ಬಾಳ್ಕರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ