ಬೇರೆಯವರಂತೆ ನಾವೂ ಸಹ ಸಮಾಜದ ಮುಖಂಡರೊಂದಿಗೆ ಸಭೆ ನಡೆಸುವುದು ಸರಿ ಇರಲ್ಲ: ಬಿವೈ ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ

Updated on: Feb 28, 2025 | 7:14 PM

ಎಲ್ಲ ಸರಿಹೋಗಿ ವಾತಾವರಣ ತಿಳಿಯಾಗುತ್ತಿರುವ ಸಮಯ ಎಂದು ವಿಜಯೇಂದ್ರ ಹೇಳುತ್ತಾರೆ. ಆದರೆ ವಾಸ್ತವ ಬೇರೇನೇ ಇದೆ. ಬಸನಗೌಡ ಪಾಟೀಲ್ ಪ್ರತ್ಯೇಕ ಸಭೆಗಳನ್ನು ನಡೆಸುವುದು ನಿಲ್ಲಿಸಿಲ್ಲ, ಫೆಬ್ರುವರಿ 20 ರೊಳಗೆ ಎಲ್ಲ ಸರಿಹೋಗುತ್ತದೆ ಅಂತ ದೆಹಲಿಯಿಂದ ವಾಪಸ್ಸು ಬಂದ ಬಳಿಕ ಖುದ್ದು ವಿಜಯೇಂದ್ರನೇ ಹೇಳಿದ್ದರು. ಭಿನ್ನರ ಚಟುವಟಿಕೆಗಳನ್ನು ಹತ್ತಿಕ್ಕಲು ವರಿಷ್ಠರು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಹಾಸನ, ಫೆ 28: ಯಡಿಯೂರಪ್ಪ (BS Yediyurappa) ಮತ್ತು ತನ್ನ ವಿರುದ್ಧ ಪಕ್ಷದ ಕೆಲ ನಾಯಕರ ಜೊತೆ ಸಮಾಜದ ಮುಖಂಡರ ಜೊತೆ ಸಭೆ ನಡೆಸಿರುವುದರ ಬಗ್ಗೆ ತಾನೇನೂ ಕಮೆಂಟ್ ಮಾಡಲ್ಲ, ಅದರೆ ತಾನು ಹೇಳಲಿಚ್ಛಿಸುವ ಸಂಗತಿಯೇನೆಂದರೆ, ಸಮಾಜದ ಮುಖಂಡರೆಂದುಕೊಂಡು ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ಸಮಾಜ ಹಾಗಿರಲಿ, ಅವರು ವಾಸ ಮಾಡುವ ಊರು ಮತ್ತು ಕೇರಿಯ ಜನ ಸಹ ಅವರನ್ನು ಗುರುತಿಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಅವರು ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆಂಬ ಕಾರಣಕ್ಕೆ ನಾವು ಸಹ ಮಾಡೋದು ಸರಿಯಿರಲ್ಲ, ತಾನು ರೇಣುಕಾಚಾರ್ಯ ಜೊತೆ ಮಾತಾಡುವುದಾಗಿ ವಿಜಯೇಂದ್ರ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ: ವಿಚಾರಣೆಗೆ ಹಾಜರಾಗಲು ಸಮನ್ಸ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.