ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ, ಕಾರ್ಯಕರ್ತರಿಂದ ನ್ಯಾಯಾಲಯದೆದುರು ಪ್ರತಿಭಟನೆ
ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕುಲದೀಪ್ ಸಿಂಗ್ ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಲು ಇಂದು ದೆಹಲಿ ಹೈಕೋರ್ಟ್ ಹೊರಗೆ ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಜಮಾಯಿಸಿತ್ತು. ತಕ್ಷಣ ಅವರನ್ನು ಆ ಸ್ಥಳದಿಂದ ಆಚೆ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರು.
ನವದೆಹಲಿ, ಡಿಸೆಂಬರ್ 26: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕುಲದೀಪ್ ಸಿಂಗ್ ಸೆಂಗಾರ್ (Kuldeep Singh Sengar) ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಲು ಇಂದು ದೆಹಲಿ ಹೈಕೋರ್ಟ್ ಹೊರಗೆ ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಜಮಾಯಿಸಿತ್ತು. ತಕ್ಷಣ ಅವರನ್ನು ಆ ಸ್ಥಳದಿಂದ ಆಚೆ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರು.
ದೆಹಲಿ ಹೈಕೋರ್ಟ್ ಹೊರಗೆ ಪ್ರತಿಭಟನಾಕಾರರನ್ನು ಪ್ರತಿಭಟನೆ ನಡೆಸದಂತೆ ತಡೆಯಲಾಯಿತು. ಇದರಿಂದ ನ್ಯಾಯಾಲಯದ ಭದ್ರತೆಯೊಂದಿಗೆ ಕೆಲಕಾಲ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ನ್ಯಾಯಾಲಯದ ಗೇಟ್‌ನಲ್ಲಿ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಅವರಿಗೆ ತಿಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ