Video: ಬೈಕ್​ಗೆ ಡಿಕ್ಕಿ ಹೊಡೆದು ಕಿಲೋಮೀಟರ್​ಗಟ್ಟಲೆ ಸವಾರನನ್ನು ಎಳೆದೊಯ್ದ ಬೊಲೆರೊ

Updated on: Dec 31, 2024 | 12:42 PM

ಬೊಲೆರೊ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಸವಾರನ ಸಮೇತ ಬೈಕ್​ನ್ನು ಕಿಲೋಮೀಟರ್​ಗಟ್ಟಲೆ ದೂರ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​ನಲ್ಲಿ ನಡೆದಿದೆ. ಡಿಸೆಂಬರ್ 29 ರಂದು ಸಂಜೆ 5 ಗಂಟೆ ಸುಮಾರಿಗೆ ವಾಜಿದ್ ಪುರಂ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುಖ್ವೀರ್ (50) ಎಂದು ಗುರುತಿಸಲಾಗಿದ್ದು, ಹಯಾತ್‌ನಗರದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೊಲೆರೊ ಅವರ ಬೈಕ್​ಗೆ ಡಿಕ್ಕಿ ಹೊಡೆದು ಅವರನ್ನು ಎಳೆದೊಯ್ದಿತ್ತು.

ಬೊಲೆರೊ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಸವಾರನ ಸಮೇತ ಬೈಕ್​ನ್ನು ಕಿಲೋಮೀಟರ್​ಗಟ್ಟಲೆ ದೂರ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​ನಲ್ಲಿ ನಡೆದಿದೆ. ಡಿಸೆಂಬರ್ 29 ರಂದು ಸಂಜೆ 5 ಗಂಟೆ ಸುಮಾರಿಗೆ ವಾಜಿದ್ ಪುರಂ ಬಳಿಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಸುಖ್ವೀರ್ (50) ಎಂದು ಗುರುತಿಸಲಾಗಿದ್ದು, ಹಯಾತ್‌ನಗರದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೊಲೆರೊ ಅವರ ಬೈಕ್​ಗೆ ಡಿಕ್ಕಿ ಹೊಡೆದು ಅವರನ್ನು ಎಳೆದೊಯ್ದಿತ್ತು. ಸುಖವೀರ್‌ಗೆ ಎರಡೂ ಕಾಲುಗಳಲ್ಲಿ ಮುರಿತಗಳು ಮತ್ತು ಅನೇಕ ಪ್ರದೇಶಗಳಿಂದ ರಕ್ತಸ್ರಾವ ಸೇರಿದಂತೆ ತೀವ್ರ ಗಾಯಗಳಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More