5 ಎಸೆತಗಳಲ್ಲಿ ಮುಗಿದ ಸೂಪರ್ ಓವರ್ ಪಂದ್ಯ
UP T20 League 2025: ಈ ಗುರಿಯನ್ನು ಬೆನ್ನತ್ತಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ನಲ್ಲಿ ಕೇವಲ 10 ರನ್ ನೀಡಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಪ್ರಿನ್ಸ್ ಯಾದವ್ ಯಶಸ್ವಿಯಾದರು. ಅದರಂತೆ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು.
ಉತ್ತರ ಪ್ರದೇಶ್ ಟಿ20 ಲೀಗ್ ರಣರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಲೀಗ್ನ 28ನೇ ಪಂದ್ಯದಲ್ಲಿ ಗೌರ್ ಗೋರಖಪುರ್ ಲಯನ್ಸ್ ಮತ್ತು ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡಗಳೂ ಮುಖಾಮುಖಿಯಾಗಿದ್ದವು. ಮಳೆಯ ಕಾರಣ 15 ಓವರ್ಗಳಿಗೆ ಸೀಮಿತವಾಗಿದ್ದ ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಗೌರ್ ಗೋರಖಪುರ್ ಲಯನ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಆದರೆ ಅಂತಿಮ ಓವರ್ನಲ್ಲಿ ಕೇವಲ 10 ರನ್ ನೀಡಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಪ್ರಿನ್ಸ್ ಯಾದವ್ ಯಶಸ್ವಿಯಾದರು. ಅದರಂತೆ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡದ ಪರ ಕಣಕ್ಕಿಳಿದ ಸಮೀರ್ ರಿಝ್ವಿ (0) ಮೊದಲ ಎಸೆತದಲ್ಲೇ ಔಟಾದರು. ಆ ಬಳಿಕ ಬಂದ ಅಭಿಷೇಕ್ ಪಾಂಡೆ 1 ರನ್ ಓಡಿದರು. ಇನ್ನು ಮೂರನೇ ಎಸೆತದಲ್ಲಿ ಆದರ್ಶ್ ಸಿಂಗ್ (0) ಕ್ಯಾಚ್ ನೀಡಿದರು. ಇದರೊಂದಿಗೆ ಕಾನ್ಪುರ್ ಸೂಪರ್‌ಸ್ಟಾರ್ಸ್ ತಂಡದ ಸೂಪರ್ ಓವರ್ 1 ರನ್ನೊಂದಿಗೆ ಅಂತ್ಯಗೊಂಡಿತು.
ಸೂಪರ್ ಓವರ್ನಲ್ಲಿ 2 ರನ್ಗಳ ಗುರಿ ಪಡೆದ ಗೌರ್ ಗೋರಖಪುರ್ ಲಯನ್ಸ್ ಪರ ವಿನೀತ್ ಪನ್ವಾರ್ 2ನೇ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
