25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?

Edited By:

Updated on: Sep 08, 2024 | 5:47 PM

1999ರಲ್ಲಿ ‘ಉಪೇಂದ್ರ’ ಸಿನಿಮಾ ಬಿಡುಗಡೆ ಆಗಿತ್ತು. ಈಗ 25 ವರ್ಷಗಳು ಕಳೆದಿದ್ದು ಮರು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ದಿನಗಳನ್ನು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್​ ಅವರು ಮೆಲುಕು ಹಾಕಿದ್ದಾರೆ. ಅಂದು ಉಪೇಂದ್ರ ಅವರಿಗೆ ನೀಡಿದ ಸಂಭಾವನೆ ಎಷ್ಟು? ಆ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

‘ಆ ಸಿನಿಮಾಗೆ ಉಪೇಂದ್ರ ಅವರು ಒಂದೂವರೆ ವರ್ಷ ಕಷ್ಟಪಟ್ಟಿದ್ದರು. ಆಗ ತುಂಬ ಕಡಿಮೆ ಸಂಭಾವನೆ ನೀಡಿದ್ದೆ. 18 ಲಕ್ಷ ರೂಪಾಯಿ ನೀಡಿರಬಹುದು. 3ರಿಂದ ಮೂರುವರೆ ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಮಾಡಿದ್ವಿ. ಡಬಲ್ ಲಾಭ ತಂದುಕೊಟ್ಟಿತು. ಅದು ಆ ಕಾಲಕ್ಕೆ ಕೆಜಿಎಫ್​, ಕಾಂತಾರ ರೀತಿ ಹಿಟ್​ ಆಯಿತು’ ಎಂದು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್​ ಅವರು ಹೇಳಿದ್ದಾರೆ. ಉಪ್ಪಿ ಅವರ ಜನ್ಮದಿನದ ಪ್ರಯುಕ್ತ ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More