Updated on: Sep 07, 2024 | 3:37 PM
ನಟ, ನಿರ್ದೇಶಕ ಉಪೇಂದ್ರ ಮನೆಯಲ್ಲಿಇಂದು ಸರಳವಾಗಿ, ಶಾಸ್ತ್ರೋಕ್ತವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗಿದೆ.ಕುಟುಂಬ ಸದಸ್ಯರು ಗಣೇಶ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
ಉಪೇಂದ್ರ ಮನೆಯಲ್ಲಿ ನಡೆದಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಸಹೋದರರ ಕುಟುಂಬದವರು ಸಹ ಭಾಗಿಯಾಗಿದ್ದರು.
ಉಪೇಂದ್ರ ಅವರ ಸಹೋದರ ಸುಧೀಂದ್ರ ಅವರ ಮಗ ನಿರಂಜನ್ ಸಹ ಇಂದು ನಡೆದಿರುವ ಗಣೇಶ ಚತುರ್ಥಿಯಲ್ಲಿ ಭಾಗಿಯಾಗಿದ್ದಾರೆ. ಎಲ್ಲರೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ನಿರಂಜನ್ ಇತ್ತೀಚೆಗೆ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿರುವ ಸಿನಿಮಾಚ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ. ಸಿನಿಮಾವನ್ನು ರಮೇಶ್ ಬಾಬು ಎಂಬಾತ ನಿರ್ದೇಶನ ಮಾಡಿದ್ದರು.
ಉಪೇಂದ್ರ ಸಿನಿಮಾಗಳಲ್ಲಿ ಡಿಫರೆಂಟ್ ಆದರೂ ಮನೆಯಲ್ಲಿ ಸಂಪ್ರದಾಯಸ್ತ, ಎಲ್ಲ ಹಬ್ಬಗಳನ್ನು ಕುಟುಂಬದವರೊಟ್ಟಿಗೆ ಸಂಪ್ರದಾಯಬದ್ಧವಾಗಿ ಆಚರಣೆ ಮಾಡುತ್ತಾರೆ.