‘ಈ ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ’ ಎಂದಿದ್ದ ಉಪ್ಪಿ; ಶಿವಣ್ಣನ ರಿಯಾಕ್ಷನ್ ಹೇಗಿತ್ತು?
‘ಓಂ’ ಸಿನಿಮಾ ಸೂಪರ್ ಹಿಟ್ ಆದ ಸಿನಿಮಾ. ಈ ಚಿತ್ರದಿಂದ ಅನೇಕರ ಬದುಕು ಬದಲಾಗಿದೆ. ಈ ಸಿನಿಮಾ ಶೂಟ್ ವೇಳೆ ಸಾಕಷ್ಟು ಘಟನೆಗಳು ನಡೆದವು. ಅದರಲ್ಲಿ ಒಂದು ಘಟನೆಯನ್ನು ಉಪೇಂದ್ರ ಅವರು ಹೇಳಿದ್ದಾರೆ. ಈ ಘಟನೆಯಿಂದ ಸಾಕಷ್ಟು ಬದಲಾವಣೆ ಆಯಿತು ಎಂಬ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ.
ಶಿವರಾಜ್ಕುಮಾರ್ ಅವರು ‘ಓಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಉಪೇಂದ್ರ ಈ ಚಿತ್ರಕ್ಕೆ ಡೈರೆಕ್ಟರ್. ಸಿನಿಮಾ ಶೂಟ್ ವೇಳೆ ನಡೆದ ಘಟನೆ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ. ‘45’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಉಪ್ಪಿ ಈ ಘಟನೆ ನೆನಪಿಸಿಕೊಂಡರು. ಒಂದು ದೃಶ್ಯದ ಬಗ್ಗೆ ಶಿವಣ್ಣಗೆ ಅಸಮಾಧಾನ ಇತ್ತು. ಈ ಬಗ್ಗೆ ಉಪೇಂದ್ರ ಬಳಿ ನಿರಂತರವಾಗಿ ಕೇಳಿದ್ದರಂತೆ. ಆದರೆ, ದೃಶ್ಯ ತೆಗೆಯಲು ಉಪೇಂದ್ರ ಒಪ್ಪಲೇ ಇಲ್ಲ. ಕೊನೆಗೆ ಶಿವಣ್ಣ ಅವರು ಯಾರದ್ದೋ ಬಳಿ ಹೇಳಿ ಕಳುಹಿಸಿದರಂತೆ. ಅವರು ಬಂದು ಹೇಳಿದಾಗ, ‘ಈ ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ’ ಎಂದಿದ್ದರು. ಇದನ್ನು ಆ ವ್ಯಕ್ತಿ ಶಿವಣ್ಣಗೆ ಹೇಳಿದ್ದರು. ಮರಳಿ ಉಪ್ಪಿ ಬಳಿ ಬಂದ ಶಿವಣ್ಣ, ‘ಇನ್ಮುಂದೆ ಏನನ್ನೂ ಹೇಳೋದಿಲ್ಲ’ ಎಂದಿದ್ದರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

