ನಟ ಉಪೇಂದ್ರ ಬದುಕಿನ ಕಾಲೇಜ್​ ಲವ್​ ಸ್ಟೋರಿಯೇ ‘ಎ’ ಸಿನಿಮಾಗೆ ಸ್ಫೂರ್ತಿ

| Updated By: ಮದನ್​ ಕುಮಾರ್​

Updated on: May 17, 2024 | 5:23 PM

ಇಂದು (ಮೇ 17) ‘ಎ’ ಸಿನಿಮಾ ಮರು ಬಿಡುಗಡೆ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಉಪೇಂದ್ರ ನಿರ್ದೇಶಿಸಿದ ಈ ಸಿನಿಮಾದಲ್ಲಿ ಕಥೆ ಭಿನ್ನವಾಗಿದೆ. ಆ ಲವ್​ಸ್ಟೋರಿಯ ಹಿಂದಿನ ಪ್ರೇರಣೆ ಏನು ಎಂದು ಕೇಳಿದ್ದಕ್ಕೆ ಉಪೇಂದ್ರ ಅವರು ತಮ್ಮದೇ ಬದುಕಿನ ನೆನಪಿನ ಪುಟವನ್ನು ತೆರೆದಿದ್ದಾರೆ. ಕಾಲೇಜು ದಿನಗಳಲ್ಲಿ ಉಪೇಂದ್ರ ಭಗ್ನಪ್ರೇಮಿ ಆಗಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ.

26 ವರ್ಷಗಳ ಹಿಂದಿನ ‘ಎ’ ಸಿನಿಮಾ (A Kannada Movie) ಈಗ ಮತ್ತೊಮ್ಮೆ ಅಬ್ಬರಿಸುತ್ತಿದೆ. ನಟ ಉಪೇಂದ್ರ ಅವರು ನಿರ್ದೇಶಿಸಿ, ಮುಖ್ಯ ಪಾತ್ರ ಮಾಡಿದ ಆ ಸಿನಿಮಾದ ಚಾರ್ಮ್​ ಇಂದಿಗೂ ಕಡಿಮೆ ಆಗಿಲ್ಲ. 1998ರಲ್ಲಿ ಮೊದಲ ಬಾರಿಗೆ ರಿಲೀಸ್​ ಆದಾಗ ಎಷ್ಟು ಕ್ರೇಜ್​ ಇತ್ತೋ ಈಗಲೂ ಅಷ್ಟೇ ಕ್ರೇಜ್​ ಉಳಿಸಿಕೊಂಡಿದೆ. ಆ ಸಿನಿಮಾದ ಕಥೆ ಕೂಡ ಡಿಫರೆಂಟ್​ ಆಗಿದೆ. ಅದಕ್ಕೆ ಏನು ಸ್ಫೂರ್ತಿ ಅಂತ ಕೇಳಿದ್ದಕ್ಕೆ ಉಪೇಂದ್ರ ಅವರು ಕಾಲೇಜು ದಿನಗಳ ತಮ್ಮ ಲವ್​ ಸ್ಟೋರಿಯನ್ನು ನೆನಪಿಸಿಕೊಂಡಿದ್ದಾರೆ. ‘ನನ್ನ ಬದುಕಿನಲ್ಲಿ ನಡೆದ ಘಟನೆಗಳೇ ಎ ಸಿನಿಮಾಗೆ ಸ್ಫೂರ್ತಿ. ಕಾಲೇಜು ದಿನಗಳಲ್ಲಿ ಯಾವುದೋ ಹುಡುಗಿಯನ್ನು ಲವ್​ ಮಾಡ್ತಿದ್ದೆ. ಲವ್​ ಎಂದರೆ ದೂರದಿಂದ ನೋಡಿ, ಕವನಗಳನ್ನು ಬರೆಯುವುದು ಅಷ್ಟೇ. ಮಾತನಾಡಿಸುವುದು ಕೂಡ ಇಲ್ಲ. ಆ ಹುಡುಗಿಗೆ ಅದು ಗೊತ್ತಿರುವುದೇ ಇಲ್ಲ. ಒಂದು ಹುಡುಗಿಗೆ ಮಾತ್ರ ನನ್ನ ಒಬ್ಬ ಸ್ನೇಹಿತ ಹೋಗಿ ಹೇಳಿದ. ‘ಉಪೇಂದ್ರ ನಿಮ್ಮನ್ನು ಲವ್ ಮಾಡ್ತಿದ್ದಾನೆ’ ಎಂದಿದ್ದಕ್ಕೆ ಆಕೆ ‘ನಾನು ಕೂಡ ಲವ್​ ಮಾಡ್ತೀನಿ. ಭೇಟಿ ಮಾಡೋಣ’ ಅಂದಳು. ಆದರೆ ನನಗೆ ಇದು ಆಗಲ್ಲ ಅಂತ ಗೊತ್ತಾಯಿತು. ಜೀವನದಲ್ಲಿ ನನಗೆ ಇನ್ನೂ ಮನೆಯೇ ಇಲ್ಲ. ನಾನೇನು ಲವ್​ ಮಾಡೋದು ಅಂತ ಅನಿಸಿತು. ಜೀವನ ಮುಖ್ಯನಾ ಅಥವಾ ಲವ್​ ಮುಖ್ಯನಾ ಎಂಬ ಪ್ರಶ್ನೆ ಮೂಡಿತು. ನಾನು ನಿರ್ದೇಶಕನಾಗಿ ಒಂದು ಸಿನಿಮಾ ಮಾಡಬೇಕು ಎಂದಾಗ ಆ ಟಾಪಿಕ್​ ಅನ್ನೇ ಆರಿಸಿಕೊಂಡೆ’ ಎಂದು ಉಪೇಂದ್ರ (Upendra) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.