‘ಬೇಸರ ಆಗೇ ಆಗುತ್ತದೆ’; ದರ್ಶನ್ ಕೇಸ್ ಬಗ್ಗೆ ಉಪೇಂದ್ರ ಮಾತು  

|

Updated on: Sep 18, 2024 | 8:18 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ. ದರ್ಶನ್ ಪ್ರಕರಣದ ಬಗ್ಗೆ ಚಿತ್ರರಂಗದ ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅವರು ಈ ಬಗ್ಗೆ ಮಾತನಾಡಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣದ ವಿಚಾರಣೆ ಶೀಘ್ರವೇ ನಡೆಯಬೇಕಿದೆ. ದರ್ಶನ್ ಬಗ್ಗೆ ಉಪೇಂದ್ರ ಮಾತನಾಡಿದ್ದಾರೆ. ‘ಪ್ರಕರಣದ ಬಗ್ಗೆ ಕೇಳಿದಾಗ ಬೇಸರ ಆಯಿತು. ಒಂದೇ ಇಂಡಸ್ಟ್ರಿಯಲ್ಲಿ ಇದ್ದೇವೆ ಎಂದಾಗ ಸಹಜವಾಗಿ ಬೇಸರ ಆಗೇ ಆಗುತ್ತದೆ. ಒಂದಲ್ಲಾ ಒಂದು ದಿನ ಸತ್ಯ ಹೊರಗೆಬರಲೇಬೇಕು. ಪ್ರಕರಣ ವಿಚಾರಣೆ ಹಂತದಲ್ಲಿ ಇದೆ. ಎಲ್ಲದರಲ್ಲೂ ಪಾರದರ್ಶಕತೆ ಇರಲಿ’ ಎಂದು ಕೋರಿಕೊಂಡಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.