ಹ್ಯಾಕರ್ ಜಾಲಕ್ಕೆ ಸಿಲುಕಿ ಉಪೇಂದ್ರ ಪುತ್ರ ಆಯುಷ್ ಕಳೆದುಕೊಂಡ ಹಣ ಎಷ್ಟು?

Updated on: Sep 15, 2025 | 4:20 PM

ದಿನದಿಂದ ದಿನಕ್ಕೆ ಸೈಬರ್ ವಂಚಕರ ಜಾಲ ದೊಡ್ಡದಾಗುತ್ತಿದೆ. ಬೇರೆ ಬೇರೆ ವಿಧಾನಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಸೆಲೆಬ್ರಿಟಿಗಳನ್ನು ಸಹ ಸೈಬರ್​​ ಖದೀಮರು ಟಾರ್ಗೆಟ್ ಮಾಡುತ್ತಿದ್ದಾರೆ. ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಲಾಗಿದೆ. ಆಯುಷ್ ಉಪೇಂದ್ರ ಸಹ 55 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ.

ದಿನದಿಂದ ದಿನಕ್ಕೆ ಸೈಬರ್ ವಂಚಕರ ಜಾಲ ದೊಡ್ಡದಾಗುತ್ತಿದೆ. ಹೊಸ ಹೊಸ ವಿಧಾನಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ. ಸೆಲೆಬ್ರಿಟಿಗಳನ್ನು ಕೂಡ ಸೈಬರ್​​ ಖದೀಮರು ಟಾರ್ಗೆಟ್ ಮಾಡಿದ್ದಾರೆ. ನಟ ಉಪೇಂದ್ರ (Upendra) ಮತ್ತು ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ (Mobile Hack) ಮಾಡಲಾಗಿದೆ. ಬಳಿಕ ಅವರ ವಾಟ್ಸಪ್​​​ನಿಂದ ಆಪ್ತರಿಗೆ, ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ಸಂದೇಶ ಕಳಿಸಿ ಹಣ ಕೇಳಲಾಗಿದೆ. ಈ ಜಾಲದಲ್ಲಿ ಉಪೇಂದ್ರ-ಪ್ರಿಯಾಂಕಾ ದಂಪತಿಯ ಪುತ್ರ ಆಯುಷ್ ಉಪೇಂದ್ರ (Aayush Upendra) ಕೂಡ 55 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಉಪೇಂದ್​ರ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.