UPSC 2023 Results: ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆ 2023, ಮೈಸೂರಿನ ಪೂಜಾಗೆ 390ನೇ ರ‍್ಯಾಂಕ್, ಮನೆಯಲ್ಲಿ ಸಂಭ್ರಮ!

UPSC 2023 Results: ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆ 2023, ಮೈಸೂರಿನ ಪೂಜಾಗೆ 390ನೇ ರ‍್ಯಾಂಕ್, ಮನೆಯಲ್ಲಿ ಸಂಭ್ರಮ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 23, 2023 | 5:26 PM

ಮೈಸೂರು ಕುವೆಂಪು ನಗರದ ನಿವಾಸಿ ಎಮ್ ಪೂಜಾ 390ನೇ ರ‍್ಯಾಂಕ್ ಪಡೆದಿದ್ದಾರೆ, ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.

ಮೈಸೂರು: ಕೇಂದ್ರ ಲೋಕ ಸೇವಾ ಆಯೋಗ ಪರೀಕ್ಷೆ 2023 (UPSC Results 2023) ಫಲಿತಾಂಶಗಳು ಪ್ರಕಟವಾಗಿದ್ದು 933 ಅಭ್ಯರ್ಥಿಗಳು ಎಲ್ಲ ಮೂರು ಹಂತಗಳಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ಸಲದಂತೆ ಈ ಬಾರಿಯೂ ಮೊದಲ ಮೂರು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳು ಪಡೆದಿರುವುದು ವಿಶೇಷ. ಇಶಿತಾ ಕಿಶೋರ್, ಗರೀಮಾ ಲೋಹಿಯ ಮತ್ತು ಉಮಾ ಹರಾತಿ ಕ್ರಮವಾಗಿ ಮೊದಲ, ದ್ವಿತೀಯ ಹಾಗೂ ತೃತೀಯ ಎಐಅರ್ (AIR) ಗಿಟ್ಟಿಸಿದ್ದಾರೆ. ಕನ್ನಡಿಗರು ಹೆಮ್ಮೆ ಪಡುವ ಸಂಗತಿಯೆಂದರೆ, ಈ ಬಾರಿ 25 ಜನ ಉತ್ತೀರ್ಣರಾಗಿರುವುದು. ಮೈಸೂರು ಕುವೆಂಪು ನಗರದ ನಿವಾಸಿ ಎಮ್ ಪೂಜಾ (M Pooja) 390ನೇ ರ‍್ಯಾಂಕ್ ಪಡೆದಿದ್ದಾರೆ. ಪೂಜಾರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಸಂಬಂಧಿಕರು, ಆಪ್ತರು ಮತ್ತು ಸ್ನೇಹಿತರು ಅವರ ಮನೆಗೆ ಭೇಟಿ ನೀಡಿ ಅಭಿನಂದಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ