ಧಾರವಾಡ ಬಸ್ ನಿಲ್ದಾಣ ಆವರಣದಲ್ಲಿ ಮೂತ್ರ ವಿಸರ್ಜನೆ.. ಸಾರ್ವಜನಿಕರಿಗೆ ದಂಡದ ಬಿಸಿ ಮುಟ್ಟಿಸಿದ ಸಿಬ್ಬಂದಿ
ಧಾರವಾಡ: ಬಯಲಿನಲ್ಲಿ ಮೂತ್ರ ವಿಸರ್ಜನೆ ವಿಚಾರ ಸಾರ್ವಜನಿಕರೊಬ್ಬರು ಮತ್ತು ಕೆಎಸ್ಆರ್‌ಟಿಸಿ ಸಿಬ್ಬಂದಿ ಮಧ್ಯೆ ಕಿರಿಕ್ ಆಗಿದೆ. ಬಯಲು ಶೌಚ ಮಾಡಿದವರಿಗೆ ದಂಡ ವಿಧಿಸುವ ವ್ಯವಸ್ಥೆಯಿದ್ದು, ದಂಡ ಕೊಡಲು ಜನ ನಿರಾಕರಿಸಿದ್ದಾರೆ.
ಧಾರವಾಡ: ಬಯಲಿನಲ್ಲಿ ಮೂತ್ರ ವಿಸರ್ಜನೆ ವಿಚಾರ ಸಾರ್ವಜನಿಕರೊಬ್ಬರು ಮತ್ತು ಕೆಎಸ್ಆರ್‌ಟಿಸಿ ಸಿಬ್ಬಂದಿ ಮಧ್ಯೆ ಕಿರಿಕ್ ಆಗಿದೆ. ಬಯಲು ಶೌಚ ಮಾಡಿದವರಿಗೆ ದಂಡ ವಿಧಿಸುವ ವ್ಯವಸ್ಥೆಯಿದ್ದು, ದಂಡ ಕೊಡಲು ಜನ ನಿರಾಕರಿಸಿದ್ದಾರೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಇಂದು ಮಂಗಳವಾರ ಈ ಘಟನೆ ನಡೆದಿದೆ. ಜನರಿಗೆ ದಂಡ ಹಾಕುತ್ತಿದ್ದ ಸಿಬ್ಬಂದಿ ಜೊತೆ ದಂಡದ ವಿಚಾರವಾಗಿ ಕಿತ್ತಾಟ ನಡೆದಿದೆ. ಪರಸ್ಪರರು ಕೈ ಕೈ ಸಹ ಮಿಲಾಯಿಸಿದ್ದಾರೆ.
ಮಹಿಳೆಯೊಬ್ಬರು ದಂಡದ ಹಣ ಕೊಡಲಿಲ್ಲವೆಂದು ಆ ಮಹಿಳೆಯ ಜೊತೆಗೂ ಸಿಬ್ಬಂದಿ ಕಿರಿಕ್ ಮಾಡಿದ್ದಾರೆ. ಈ ಕಿತ್ತಾಟದ ವಿಡಿಯೋ ವೈರಲ್ ಆಗಿದೆ. ನಿಲ್ದಾಣದಲ್ಲಿ ಸುಲಭ ಶೌಚಾಲಯದ ವ್ಯವಸ್ಥೆ ಇದ್ದರೂ ನಿಲ್ದಾಣದ ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಹೀಗೆ ಮೂತ್ರ ವಿಸರ್ಜನೆ ಮಾಡಿದವರಿಗೆ ಸಿಬ್ಬಂದಿ ದಂಡ ಹಾಕಿ, ಬಿಸಿ ಮುಟ್ಟಿಸುತ್ತಿದ್ದಾರೆ. ಈ ವೇಳೆ ದಂಡ ಕೊಡಲು ಕೆಲವರು ಹಿಂದೇಟು ಹಾಕಿದ್ದಾರೆ. ಈ ಹಂತದಲ್ಲಿ ಒಬ್ಬ ಯುವಕನ ಜೊತೆಯೂ ಸಿಬ್ಬಂದಿ ಕೈ ಕೈ ಮಿಲಾಯಿಸಿದ್ದಾರೆ.