ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​

Updated on: Mar 02, 2026 | 6:39 PM

ಕುವೈತ್ ತಪ್ಪಾಗಿ 3 ಯುಎಸ್ ಜೆಟ್‌ಗಳನ್ನು ಹೊಡೆದುರುಳಿಸಿದೆ. ಈ ವಿಡಿಯೋದಲ್ಲಿ F-15 ಜೆಟ್​ಗಳು ಕೆಳಗೆ ಬೀಳುವುದನ್ನು ನೋಡಬಹುದು. ಇರಾನ್ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಿರುವ 3 ಯುಎಸ್ ಫೈಟರ್ ಜೆಟ್‌ಗಳನ್ನು ಇಂದು ಬೆಳಿಗ್ಗೆ ಕುವೈತ್ ವಾಯು ರಕ್ಷಣಾ ಪಡೆ ಮಿಸ್ಟೇಕ್​ನಿಂದ ಹೊಡೆದುರುಳಿಸಿದೆ ಎಂದು ಅಮೆರಿಕ ಹೇಳಿದೆ.

ಕುವೈತ್, ಮಾರ್ಚ್ 2: ಕುವೈತ್ ತನ್ನ ವ್ಯಾಪ್ತಿಯೊಳಗೆ ಬಂದ ಅಮೆರಿಕದ 3 ಫೈಟರ್​ ಜೆಟ್​​ಗಳನ್ನು ಹೊಡೆದುರುಳಿಸಿದೆ. ಅಮೆರಿಕದ (US Attack) ಬೆಂಬಲಿತ ದೇಶವಾಗಿರುವ ಕುವೈತ್ ಮಿಸ್ ಆಗಿ ಈ ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದೆ ಎಂದು ಯುಎಸ್​ ಖಚಿತಪಡಿಸಿದೆ. ಪ್ರತಿ ವಿಮಾನದಲ್ಲಿದ್ದ ಎಲ್ಲ ಏರ್‌ಕ್ರೂ ಸದಸ್ಯರು ಸುರಕ್ಷಿತವಾಗಿ ಹೊರಹಾರಲ್ಪಟ್ಟಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುವೈತ್ ಮಿಸ್ಟೇಕ್ ಆಗಿ ನಮ್ಮ ಜೆಟ್​​ಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More