Assembly Speaker: ಯುಟಿ ಖಾದರ್ 16ನೇ ವಿಧಾನ ಸಭೆಯ ಸ್ಪೀಕರ್ ಖಚಿತ, ಮುಖ್ಯ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಕೆ!
ನಿನ್ನೆ ಪಕ್ಷದ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಅಗಿ ಕಾರ್ಯ ನಿರ್ವಹಿಸಿದ್ದರು.
ಬೆಂಗಳೂರು: ಮಂಗಳೂರು ಶಾಸಕ ಯುಟಿ ಖಾದರ್ (UT Khader) 16ನೇ ವಿಧಾನ ಸಭೆಯ ಸ್ಪೀಕರ್ ಆಗೋದು ಈಗ ಖಚಿತವಾಗಿದೆ. ವಿವಾದೀತ ರಾಜಕಾರಣಿ ಎನಿಸಿಕೊಂಡಿರುವ ಖಾದರ್ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ (Vandita Sharma) ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಸಚಿವ ಅಜಯ್ ಸಿಂಗ್ ಮತ್ತು ಇನ್ನೂ ಕೆಲ ನಾಯಕರು ಅಭಿನಂದಿಸಿದರು. ನಿನ್ನೆ ಪಕ್ಷದ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಅಗಿ ಕಾರ್ಯ ನಿರ್ವಹಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ