AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಕಾಂಗ್ರೆಸ್ ನಾಯಕರ ಮನವೊಲಿಕೆ ಸಕ್ಸಸ್: ಸ್ಪೀಕರ್​ ಸ್ಥಾನಕ್ಕೆ ಯುಟಿ ಖಾದರ್ ಬಹುತೇಕ ಫೈನಲ್​

ಕೊನೆಗೂ ಕಾಂಗ್ರೆಸ್ ನಾಯಕರು ಸ್ಪೀಕರ್​ನನ್ನು ಅಂತಿಮಗೊಳಿಸಿದೆ. ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಅವರು ಮಾತುಕತೆ ಮೂಲಕ ಹಿರಿಯ ನಾಯಕರೊಬ್ಬರನ್ನು ಸ್ಪೀಕರ್ ಆಗಲು ಒಪ್ಪಿಸಿದ್ದಾರೆ.

ಕೊನೆಗೂ ಕಾಂಗ್ರೆಸ್ ನಾಯಕರ ಮನವೊಲಿಕೆ ಸಕ್ಸಸ್: ಸ್ಪೀಕರ್​ ಸ್ಥಾನಕ್ಕೆ ಯುಟಿ ಖಾದರ್ ಬಹುತೇಕ ಫೈನಲ್​
ಯು.ಟಿ.ಖಾದರ್
ರಮೇಶ್ ಬಿ. ಜವಳಗೇರಾ
|

Updated on:May 23, 2023 | 7:36 AM

Share

ಬೆಂಗಳೂರು: ಕೊನೆಗೂ ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ (Speaker Karnataka assembly) ಯಾರು ಎನ್ನುವುದಕ್ಕೆ ತೆರೆ ಬಿದ್ದಿದೆ. ಅಚ್ಚರಿ ಆಯ್ಕೆಯಾಗಿ ಮಾಜಿ ಸಚಿವ ಯುಟಿ ಖಾದರ್(UT Khader) ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕಾರದ ಆರ್.ವಿ.ದೇಶಪಾಂಡೆ, ಟಿಬಿ ಜಯಚಂದ್ರ ಹಾಗೂ ಹೆಚ್​ಕೆ ಪಾಟೀಲ್ ಇವರಲ್ಲಿ ಒಬ್ಬರನ್ನು ಸ್ಪೀಕರ್ ಮಾಡಲು ಕಾಂಗ್ರೆಸ್​ ಹೈಕಮಾಂಡ್ ಚರ್ಚೆ ನಡೆಸಿತ್ತು. ಆದ್ರೆ, ಇವರ ಪೈಕಿ ಯಾರೂ ಸ್ಫೀಕರ್ ಆಗಲು ಒಪ್ಪದಿದ್ದಾಗ ಅಂತಿಮವಾಗಿ ಯುಟಿ ಖಾದರ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ​

ಇದನ್ನೂ ಓದಿ: ಸಂಪುಟದಲ್ಲಿ ಬೆಂಬಲಿಗರ ಸೇರ್ಪಡೆಗೆ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಸರ್ಕಸ್

ಹಿರಿಯ ಶಾಸಕರು ಸಭಾಧ್ಯಕ್ಷರಾಗಲು ಹಿಂದೇಟು ಹಿನ್ನಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಯು ಟಿ ಖಾದರ್​ಗೆ ಕರೆ ಮಾಡಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಮನವಿ ಮಾಡಿದ್ದಾರೆ. ಈ ಹಿಂದೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೀರಿ. ಪಕ್ಷ ನಿಮ್ಮ ಜೊತೆ ಇದೆ, ನಿಮ್ಮ ಹಿರಿತನಕ್ಕೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದ್ದಾರೆ.

ಬಳಿಕ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಹ ಖಾದರ್ ಅವರ ಜೊತೆ ಚರ್ಚಿಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಯುಟಿ ಖಾದರ್ ವಿಧಾನಸಭೆ ಸ್ಪೀಕರ್ ಆಗಲು ಒಪ್ಪಿಕೊಂಡಿದ್ದಾರೆ. ಅದರಂತೆ ಇಂದು(ಮೇ 23) ಬೆಳಿಗ್ಗೆ 11 ಗಂಟೆಗೆ ಸಭಾಧ್ಯಕ್ಷ ಸ್ಥಾನಕ್ಕೆ ಯುಟಿ ಖಾದರ್ ನಾಮಪತ್ರ ಸಲ್ಲಿಸಲಿದ್ದು, ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ. ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಅದಕ್ಕಾಗಿ ವಿಧಾನಸಭೆ ಬುಲೆಟಿನ್ ಹೊರಡಿಸಿದ್ದು, ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಅವಿರೋಧ ಆಯ್ಕೆಯಾಗಿರುವ ಸಂಪ್ರದಾಯವಿದೆ.

ಯುಟಿ ಖಾದರ್​ ಮಂಗಳೂರು ಕ್ಷೇತ್ರದಿಂದ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಇವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಹಾಗೂ ಆಹಾರ ಸರಬರಾಜು ಇಲಾಖೆ ಸಚಿವರಾಗಿದ್ದರು. ಅಲ್ಲದೇ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕರಾಗಿದ್ದರು.

ಇನ್ನು ಕರ್ನಾಟಕ ಕಾಂಗ್ರೆಸ್​ನ (Karnataka Congress) ಬಣ ರಾಜಕಾರಣ ಸಚಿವ ಸಂಪುಟ ರಚನೆಯಲ್ಲೂ ಮುಂದುವರಿದಿದೆ. ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ  ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸರ್ಕಸ್ ನಡೆಸುತ್ತಿದ್ದು, ಯಾರಿಗೆ ಮಣೆ ಹಾಕಬೇಕೆಂದು ಹೈಕಮಾಂಡ್​ಗ್ ತಲೆ ಬಿಸಿಯಾಗಿದೆ.

Published On - 7:28 am, Tue, 23 May 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ