ಗೋರಖನಾಥ ದೇವಾಲಯದಲ್ಲಿ ವಿಜಯದಶಮಿ ವಿಶೇಷ ಪೂಜೆ ನೆರವೇರಿಸಿದ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ದೇವಾಲಯದಲ್ಲಿ ವಿಜಯದಶಮಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಸಾರ್ವಜನಿಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಗೋರಖನಾಥ ದೇವಸ್ಥಾನದಲ್ಲಿ ವಿಜಯದಶಮಿ ಸಂದರ್ಭದಲ್ಲಿ ಗೋರಕ್ಷಪೀಠಾಧೀಶ್ವರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಿವನ ಅವತಾರವಾದ ಮಹಾಯೋಗಿ ಗುರು ಗೋರಖನಾಥರ ವಿಶೇಷ ಪೂಜೆ ಮತ್ತು ಆಚರಣೆಗಳನ್ನು ನೆರವೇರಿಸಿದರು.
ಗೋರಖ್‌ಪುರ, ಅಕ್ಟೋಬರ್ 2: ಗೋರಖನಾಥ ದೇವಸ್ಥಾನದಲ್ಲಿ ವಿಜಯದಶಮಿಯಾದ ಇಂದು ಗೋರಕ್ಷಪೀಠಾಧೀಶ್ವರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಿವನ ಅವತಾರವಾದ ಮಹಾಯೋಗಿ ಗುರು ಗೋರಖನಾಥರ ವಿಶೇಷ ಪೂಜೆ ಮತ್ತು ವಿಧಿವಿಧಾನಗಳನ್ನು ನೆರವೇರಿಸಿದರು. ಗೋರಕ್ಷಪೀಠಾಧೀಶ್ವರನ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿದ ಸಿಎಂ ಯೋಗಿ ಅವರು ಪೀಠದ ಆಚಾರ-ವಿಚಾರಗಳನ್ನು ವೀಕ್ಷಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ