ಲೈಬ್ರೆರಿಗೆ ಹೋಗ್ತಿದ್ದ ಯುವತಿಯನ್ನು ಅಟ್ಟಾಡಿಸಿಕೊಂಡು ಬಂದು ಕಿರುಕುಳ ನೀಡಿದ ವ್ಯಕ್ತಿ

Updated on: Sep 24, 2025 | 3:36 PM

ಗ್ರಂಥಾಲಯಕ್ಕೆ ಹೋಗುತ್ತಿದ್ದಂತಹ ಯುವತಿಯನ್ನು ವ್ಯಕ್ತಿಯೊಬ್ಬ ಹಿಂಬಾಳಿಸುತ್ತಾ ಬಂದು ಆಕೆಗೆ ಕಿರುಕುಳ ನೀಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಎಂಬಲ್ಲಿ ನಡೆದಿದೆ. ಗ್ರಂಥಾಲಯದ ಸಿಬ್ಬಂದಿ ಕೀಚಕನಿಂದ ಯುವತಿಯನ್ನು ರಕ್ಷಣೆ ಮಾಡಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಯುವತಿಗೆ ಕಿರುಕುಳ ನೀಡಿದ ಶಹಬಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ, ಸೆಪ್ಟೆಂಬರ್ 24: ಪುಂಡ ಯುವಕರ ಅಟ್ಟಹಾಸಗಳಿಗೆ  ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯಲ್ಲಿ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕೀಚಕನೊಬ್ಬ ಲೈಬ್ರೆರಿಗೆ ಹೋಗ್ತಿದ್ದ ಯುವತಿಯನ್ನು  ಹಿಂಬಾಲಿಸಿಕೊಂಡು ಬಂದು ಆಕೆಗೆ ಕಿರುಕುಳ ನೀಡಿದ್ದಾನೆ. ಆತನ ದುರ್ವರ್ತನೆಯಿಂದ ಆ ಯುವತಿ ಹೆದರಿ ತಕ್ಷಣ ಲೈಬ್ರೆರಿ ಒಳಗೆ ಓಡಿ ಹೋಗಿದ್ದು, ಲೈಬ್ರೆರಿ ಸಿಬ್ಬಂದಿ ಸಹಾಯದಿಂದ ಯುವತಿ ಕೀಚಕನಿಂದ ಬಚಾವ್ ಆಗಿದ್ದಾಳೆ. ಶಹಬಾಜ್ ಅಲಿಯಾಸ್ ಅಮನ್ ಎಂಬಾತ ಆ ಯುವತಿಗೆ ಕಿರುಕುಳ ನೀಡಿದ್ದು, ಈ ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಸದ್ಯ ಇದೀಗ ಯುವತಿಗೆ ಕಿರುಕುಳ ನೀಡಿದ ಶಹಬಾಜ್‌ನನ್ನು ಸದರ್ ಕೊಟ್ವಾಲಿ ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ