Video: ಕೋಲ್ಕತ್ತಾ ಪ್ರವಾಹದ ನೀರಿನಲ್ಲಿ ಸಿಲುಕಿ ಅನಾಥವಾದ ಐಷಾರಾಮಿ ರೋಲ್ಸ್-ರಾಯ್ಸ್ ಕಾರು
ಕೋಲ್ಕತ್ತಾದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಸ್ಥಿತಿ ಎದುರಾಗಿದೆ. ಪ್ರವಾಹದ ನೀರಿನಲ್ಲಿ ಐಷಾರಾಮಿ ರೋಲ್ಸ್-ರಾಯ್ಸ್ ಕಾರು ಸಿಲುಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಕಾರು ನೀರಿನಲ್ಲಿ ಸಿಲುಕಿರುವುದನ್ನು ಕಾಣಬಹುದು. ಮರದ ರೆಂಬೆಗಳು ಕಾರಿನ ಮೇಲೆ ಬಿದ್ದಿರುವುದನ್ನು ಕಾಣಬಹುದು.
ಕೋಲ್ಕತ್ತಾ, ಸೆಪ್ಟೆಂಬರ್ 24: ಕೋಲ್ಕತ್ತಾದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಸ್ಥಿತಿ ಎದುರಾಗಿದೆ. ಪ್ರವಾಹದ ನೀರಿನಲ್ಲಿ ಐಷಾರಾಮಿ ರೋಲ್ಸ್-ರಾಯ್ಸ್ ಕಾರು ಸಿಲುಕಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ವೈರಲ್ ಆದ ವಿಡಿಯೋದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಕಾರು ನೀರಿನಲ್ಲಿ ಸಿಲುಕಿರುವುದನ್ನು ಕಾಣಬಹುದು. ಮರದ ರೆಂಬೆಗಳು ಕಾರಿನ ಮೇಲೆ ಬಿದ್ದಿರುವುದನ್ನು ಕಾಣಬಹುದು.
ಬೈಕ್ ಹಾಗೂ ಇತರೆ ಕಾರುಗಳು ಈ ಕಾರಿನ ಸುತ್ತಲೂ ಓಡಾಡುತ್ತಿರುವುದನ್ನು ಕಾಣಬಹುದು. ಕೋಲ್ಕತ್ತಾದಲ್ಲಿ 37 ವರ್ಷಗಳಲ್ಲಿ ಸುರಿದ ಅತಿ ದೊಡ್ಡ ಮಳೆ ಇದಾಗಿದೆ. ಭಾರೀ ಮಳೆಯಿಂದಾಗಿ ನಗರದಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ತೀವ್ರ ಅಡಚಣೆ ಉಂಟಾಗಿದ್ದು, ಕೆಲವು ಸೇವೆಗಳು ಸ್ಥಗಿತಗೊಂಡಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

