ವಿ. ಮನೋಹರ್ (V. Manohar) ಅವರು ಸಂಗೀತ ಸಂಯೋಜಕರಾಗಿ ಫೇಮಸ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳಿಗೆ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಮನೋಹರ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ‘ನಾನು ಮದುವೆ ಆಗಲೇಬಾರದು ಎಂದುಕೊಂಡಿದ್ದೆ. ಆಗ ಒಂದು ಹುಡುಗಿ ಪರಿಚಯ ಆಯಿತು. ಅವರನ್ನೇ ಮದುವೆ ಆಗಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಮದುವೆ ಆಗಲ್ಲ ಎಂದಿದ್ದರಿಂದ ಎಲ್ಲರ ಎದುರು ವಿವಾಹ ಆಗಲು ಮುಜುಗರ ಆಯಿತು. ಹೀಗಾಗಿ, ತಮಿಳುನಾಡಲ್ಲಿ ಮದುವೆ ಆದೆ. ಅಲ್ಲಿ ಕನ್ನಡದ ವ್ಯಕ್ತಿ ಬಂದು ಶೂಟಿಂಗಾ ಸರ್ ಎಂದು ಕೇಳಿದ್ದ’ ಎಂಬುದಾಗಿ ಮನೋಹರ್ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ