‘ಶಾಂತಿ-ಕ್ರಾಂತಿ’ ನೆನಪು: ’ಆ ದೃಶ್ಯ ನೆನಪಿಸಿಕೊಂಡರೆ ಮೈ ಝುಂ ಅನ್ನುತ್ತೆ‘ ಎಂದ ರವಿಚಂದ್ರನ್
Ravichandran: ‘ಓ ನನ್ನ ಚೇತನ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ರವಿಚಂದ್ರನ್, ‘ಶಾಂತಿ-ಕ್ರಾಂತಿ’ ಸಿನಿಮಾದ ಚಿತ್ರೀಕರಣದ ಘಟನೆ ನೆನಪಿಸಿಕೊಂಡರು.
‘ಓ ನನ್ನ ಚೇತನ’ ಟ್ರೈಲರ್ (Trailer) ರಿಲೀಸ್ ಮಾಡಿದ ಕ್ರೇಜಿಸ್ಟಾರ್ ವಿ.ರವಿಚಂದ್ರನ್. ತಮ್ಮ ಅಪೂರ್ವ ನಾಯಕಿ ಅಪೂರ್ವ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತರು. ಮಕ್ಕಳ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡಿಕೊಟ್ಟ ರವಿಮಾಮ. ಓ ನನ್ನ ಚೇತನ ಟ್ರೈಲರ್ ಲಾಂಚ್ ವೇಳೆ ಪ್ರೇಮಲೋಕ, ಶಾಂತಿಕ್ರಾಂತಿಯ ಅದ್ಭುತ ಸನ್ನಿವೇಶಗಳನ್ನು ನೆನಪು ಮಾಡಿಕೊಂಡರು. ‘ಶಾಂತಿ ಕ್ರಾಂತಿ’ ಸಿನಿಮಾದ ಸೆಟ್ನಲ್ಲಿ ಮೂರು ಸಾವಿರ ಮಕ್ಕಳು ಇರುತ್ತಿದ್ದರು ಎಂದ ರವಿಚಂದ್ರನ್ ಅವರನ್ನೆಲ್ಲ ಹೇಗೆ ಸಂಭಾಳಿಸಿದ್ದು ಎಂಬ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಕೊನೆಗೆ ಮೊಬೈಲ್ ನೋಡೋ ಮಕ್ಕಳು, ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 12, 2023 10:57 PM