‘ಚುನಾವಣೆ ಪ್ರಚಾರಕ್ಕೆ ನನ್ನ ಜಾತಿ ಅಡ್ಡ ಬರುತ್ತೆ ಅನ್ಸುತ್ತೆ’: ರವಿಚಂದ್ರನ್
‘ಎಲೆಕ್ಷನ್ ಕ್ಯಾಂಪೇನ್ಗೆ ಸಾಮಾನ್ಯವಾಗಿ ಯಾರೂ ನನ್ನನ್ನು ಕರೆಯೋದಿಲ್ಲ. ನನ್ನ ಜಾತಿ ಅವರಿಗೆ ಅಡ್ಡ ಬರುತ್ತದೆ ಅನ್ಸುತ್ತೆ. ನನಗೆ ಅದು ಗೊತ್ತಿಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗಿ ಆಗುತ್ತೀರಾ ಎಂದು ಕೇಳಿದ್ದಕ್ಕೆ ಅವರು ಈ ರೀತಿ ಉತ್ತರಿಸಿದ್ದಾರೆ. ಈ ಕುರಿತು ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ದೇಶಾದ್ಯಂತ ಲೋಕಸಭಾ ಚುನಾವಣೆ (Lok Sabha Elections) ಕಾವು ಜೋರಾಗುತ್ತಿದೆ. ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಿವೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳನ್ನು ಪ್ರಚಾರಕ್ಕೆ (Political Campaign) ಬಳಸಿಕೊಳ್ಳಲಾಗುತ್ತಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ನಟ-ನಟಿಯರು ಪ್ರಚಾರಕ್ಕೆ ಇಳಿಯಲಿದ್ದಾರೆ. ಹಾಗಾದ್ರೆ ರವಿಚಂದ್ರನ್ ಕೂಡ ಪ್ರಚಾರಕ್ಕೆ ಹೋಗುತ್ತಾರಾ? ಸುದ್ದಿಗೋಷ್ಠಿಯೊಂದರಲ್ಲಿ ರವಿಚಂದ್ರನ್ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಸಾಮಾನ್ಯವಾಗಿ ಕ್ಯಾಂಪೇನ್ಗೆ ನನ್ನನ್ನು ಯಾರೂ ಕರೆಯುವುದಿಲ್ಲ. ಅವರಿಗೆ ನನ್ನ ಜಾತಿ ಅಡ್ಡ ಬರುತ್ತದೆ ಎನಿಸುತ್ತದೆ. ಅದು ನನಗೆ ಗೊತ್ತಿಲ್ಲ. ಒಂದು ವೇಳೆ ಪ್ರಚಾರಕ್ಕೆ ಕರೆದರೆ ನಾನು ಸ್ನೇಹಿತರಿಗೆ ಇಲ್ಲ ಅಂತ ಹೇಳಲ್ಲ. ನನಗೆ ಯಾವುದೇ ಅಭ್ಯಂತರ ಇಲ್ಲ. ಆದರೆ ಯಾವುದೇ ಪಕ್ಷಕ್ಕೆ ನಾನು ಅಂಟಿಕೊಳ್ಳಲ್ಲ. ನನ್ನದು ಕಾಮನ್ ಪಾರ್ಟಿ. ಪ್ರಚಾರಕ್ಕೆ ಹೋಗುವ ಐಡಿಯಾ ಇರಲ್ಲ. ಬೇರೆ ವಿಚಾರಗಳ ಮೇಲೂ ಅದು ಅವಲಂಬಿತ ಆಗಿರುತ್ತೆ’ ಎಂದು ರವಿಚಂದ್ರನ್ (Ravichandran) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.