ವೈಕುಂಠ ಏಕಾದಶಿ ಸಂಭ್ರಮ: ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು
ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿದೆ. ತಿರುಮಲ ಸೇರಿದಂತೆ ರಾಜ್ಯದ ವಿವಿಧ ವೆಂಕಟೇಶ್ವರ ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಗೋವಿಂದ ನಾಮಸ್ಮರಣೆ, ಸ್ವರ್ಗದ ಬಾಗಿಲು ದರ್ಶನ ಹಾಗೂ ರಥೋತ್ಸವಗಳ ಮೂಲಕ ಭಕ್ತರು ಭಕ್ತಿ ಭಾವ ಮೆರೆದರು. ವಿಡಿಯೋ ನೋಡಿ.
ಬೆಂಗಳೂರು, ಡಿಸೆಂಬರ್ 30: ಇಂದು ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು. ತಿಮ್ಮಪ್ಪನ ಸನ್ನಿಧಾನಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಎಲ್ಲೆಲ್ಲೂ ಗೋವಿಂದ ನಾಮಸ್ಮರಣೆ ಮೇಳೈಸಿತ್ತು. ತಿರುಮಲದ ವೆಂಕಟೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತಗಣ ಗೋವಿಂದನ ದರ್ಶನ ಪಡೆದು ಪುನೀತರಾದರು. ಸ್ವರ್ಣಖಚಿತ ರಥವೇರಿದ ತಿಮ್ಮಪ್ಪನನ್ನ ಭಕ್ತರು ಕಣ್ತುಂಬಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
