ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಕೇಸ್: ಬಿ ನಾಗೇಂದ್ರ ಆಪ್ತರಿಗೆ ಸಿಬಿಐ ಶಾಕ್!
ಮಾಜಿ ಸಚಿವ ಬಿ. ನಾಗೇಂದ್ರರ ಹುಟ್ಟುಹಬ್ಬದ ದಿನವೇ, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆದಿದೆ. ಕುಮಾರಸ್ವಾಮಿ ಮತ್ತು ಅವರ ಮಗ ಗೋವಿಂದರಾಜು ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ನೆಕ್ಕಂಟಿ ನಾಗರಾಜ್ ಅವರ ಖಾತೆಯಿಂದ ಗೋವಿಂದರಾಜು ಅವರ ಖಾತೆಗೆ ಹಣ ವರ್ಗಾವಣೆಯಾಗಿದ್ದು, ಗೋವಿಂದರಾಜು ವಿವಿಧ ಕಡೆ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಳ್ಳಾರಿ, ಸೆಪ್ಟೆಂಬರ್ 15: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ (B Nagendra) ಆಪ್ತ, ಬಳ್ಳಾರಿ ಉದ್ಯಮಿ, ಹಾಲಿ ಬಳ್ಳಾರಿ ಕಾರ್ಪೊರೇಟರ್ ಕುಮಾರಸ್ವಾಮಿ ಸೇರಿದಂತೆ ಮಗ ಗೋವಿಂದರಾಜು ಮನೆಗಳ ಮೇಲೆ ಸಿಬಿಐ ದಾಳಿ ಮಾಡಿದೆ. ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಬಿ ನಾಗೇಂದ್ರಗೆ ಶಾಕ್ ನೀಡಲಾಗಿದೆ. ಬಳ್ಳಾರಿಯ ಗಾಂಧಿನಗರದಲ್ಲಿರುವ ಮನೆಗಳಲ್ಲಿ ಸಿಬಿಐ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ಮೊಟ್ಟೆ ವ್ಯಾಪಾರ ಸೇರಿ ಹಲವು ಉದ್ಯಮ ನಡೆಸುತ್ತಿರುವ ಕುಮಾರಸ್ವಾಮಿ, ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿಂದರಾಜು ಖಾತೆಗೆ ಹಣ ವರ್ಗಾವಣೆ ಸಂಬಂಧ ಗೋವಿಂದ ರಾಜು ಮನೆ ಮೇಲೆ ಸಿಬಿಐ ದಾಳಿ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
