AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಎಸ್ಐಟಿ ಮತ್ತು ಸಿಬಿಐ ನಡೆಸುತ್ತಿವೆ, ಬಿಜೆಪಿಗೆ ಸಿಬಿಐ ಮೇಲೆ ಅನುಮಾನವೇ? ಜಿ ಪರಮೇಶ್ವರ್

ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ಎಸ್ಐಟಿ ಮತ್ತು ಸಿಬಿಐ ನಡೆಸುತ್ತಿವೆ, ಬಿಜೆಪಿಗೆ ಸಿಬಿಐ ಮೇಲೆ ಅನುಮಾನವೇ? ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 09, 2024 | 5:18 PM

Share

ಎಸ್ ಐಟಿ ಅಧಿಕಾರಿಗಳಿಗೆ ಮುಕ್ತವಾಗಿ ತನಿಖೆಕ ನಡೆಸುವ ಅವಕಾಶ ನೀಡಲಾಗಿದೆ ಎಂದು ಹೇಳಿದ ಗೃಹ ಸಚಿವ ಪರಮೇಶ್ವರ್, ವಾಲ್ಮೀಕಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಕೌಂಟಂಟ್ ನಡುವೆ ನಡೆದಿದೆ ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್ ನ ತನಿಖೆಯನ್ನೂ ಅಧಿಕಾರಿಗಳು ನಡೆಸಲಿದ್ದಾರೆ ಎಂದರು. 

 

 

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ, ಬೇಕಾಬಿಟ್ಟಿಯಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಪ್ರಕರಣದ ತನಿಖೆಯನ್ನು ಎಸ್ಐಡಿ ಮತ್ತು ಸಿಬಿಐ ಎರಡು ಏಜೆನ್ಸಿಗಳ ಮಾಡುತ್ತಿದ್ದು ಎರಡು ಆಯಾಮಗಳಲ್ಲಿ ತನಿಖೆ ನಡೆಯತ್ತಿದೆ. ನಿಗಮದ ಹಣಕಾಸಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ರಾಷ್ಟ್ರೀಕೃತ, ಡಿಸಿಸಿ ಮತ್ತು ಸಹಕಾರಿ ಸಂಘಗಳ ದಾಖಲಾತಿಗಳನ್ನು ತನಿಖೆ ಮಾಡುತ್ತಿದ್ದಾರೆ. ಎಸ್ಐಟಿ ಅಧಿಕಾರಿಗಳು ಪರಿಶಿಷ್ಟ ಪಂಗಡ ನಿಗಮದ ವ್ಯವಹಾರಗಳ ತನಿಖೆ ನಡೆಸುತ್ತಿದ್ದಾರೆ. ತನಿಖೆ ಜಾರಿಯಲ್ಲಿರುವಾಗಲೇ ಅದು ಸರಿಯಾಗಿ ನಡೆಯುತ್ತಿಲ್ಲ, ಪಾರದರ್ಶಕವಾಗಿಲ್ಲ ಅಂತ ಬಿಜೆಪಿ ನಾಯಕರು ಆಪಾದನೆ ಮಾಡಿದರೆ ಅದಕ್ಕೇನರ್ಥ? ಅವರು ಹೇಳೋದು ಸಿಬಿಐ ಸರಿಯಾಗಿ ತನಿಖೆ ಮಾಡುತ್ತಿಲ್ಲ ಅಂತಲೇ? ಮಾತೆತ್ತಿದರೆ ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಹೇಳುವ ಅವರು ಅದು ನಡೆಸುತ್ತಿರುವ ತನಿಖೆಯ ಮೇಲೆ ಅನುಮಾನ ಪಟ್ಟರೆ ಹೇಗೆ ಎಂದು ಪರಮೇಶ್ವರ್ ಪ್ರಶ್ನಿಸಿದರು, ಪಾರದರ್ಶಕತೆ ಇರಬೇಕೆನ್ನುವ ಕಾರಣಕ್ಕೆ ಅವರು ಜನರ ನಡುವೆ ನಿಂತು ಸಾರ್ವಜನಿಕಾವಾಗಿ ತನಿಖೆ ಮಾಡಲಾಗುತ್ತಾ ಎಂದು ಅವರು ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಪ್ರಜ್ವಲ್ ಪ್ರಕರಣದಲ್ಲಿ ಡಿಕೆಶಿ ಹೆಸರು: ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಿದು