ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ: ಗೆಟ್ ಮ್ಯಾನ್​ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

Updated on: Jun 27, 2025 | 7:56 PM

ದಾವಣಗೆರೆಯ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿತು. ಆದರೆ, ರೈಲು ಸಿಬ್ಬಂದಿಯ ತ್ವರಿತ ಕ್ರಮದಿಂದ ಯಾವುದೇ ಪ್ರಮುಖ ಅನಾಹುತ ಸಂಭವಿಸಲಿಲ್ಲ. ಪ್ರಯಾಣಿಕರನ್ನು ಶತಾಬ್ದಿ ಎಕ್ಸ್‌ಪ್ರೆಸ್‌ಗೆ ವರ್ಗಾಯಿಸಲಾಯಿತು. ಸಮಯಪ್ರಜ್ಞೆಯಿಂದ ಒಂದು ದೊಡ್ಡ ಅಪಾಯವನ್ನು ತಪ್ಪಿಸಲಾಗಿದೆ. ಇದು ರೈಲು ಸುರಕ್ಷತೆಯ ಬಗ್ಗೆ ಗಮನ ಹರಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.

ದಾವಣಗೆರೆಯಲ್ಲಿ ವಂದೇ ಭಾರತ್​ ರೈಲಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಭಾರಿ ದುರಂತವೊಂದು ತಪ್ಪಿದೆ. ವಂದೇ ಭಾರತ್ ರೈಲು ಧಾರವಾಡದಿಂದ ಬೆಂಗಳೂರಿಗೆ ಬರುತ್ತಿತ್ತು. ರೈಲು ದಾವಣೆಗೆರೆ ಸನಿಹ ಬಂದಾಗ, ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲ ಅನ್ನು ದಾವಣಗೆರೆಯಲ್ಲಿ ನಿಲುಗಡೆ ಮಾಡಲಾಗಿದೆ. ಪ್ರಯಾಣಿಕರು ಶತಾಬ್ದಿ ಎಕ್ಸ್‌ಪ್ರೆಸ್​ನಲ್ಲಿ ಬೆಂಗಳೂರಿಗೆ ಬಂದರು. ಗೆಟ್ ಮ್ಯಾನ್​ನ ಸಮಯ ಪ್ರಜ್ಞೆಯಿಂದ ಸಾವಿರಾರು ಜನರ ಪ್ರಾಣ ಉಳಿದಿದೆ.