ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯೆಂದು ಯಾವತ್ತೂ ಹೇಳಿಲ್ಲ: ಬಸವರಾಜ ಬೊಮ್ಮಾಯಿ
ಜಮೀರ್ ಅಹ್ಮದ್ ಖಾನ್ ವಸತಿ ಸಚಿವರು ಮತ್ತು ಅವರ ಇಲಾಖೆಯಲ್ಲೇ ದೊಡ್ಡ ಹಗರಣ ನಡೆದಿದೆ, ಮನೆಗಳ ಹಂಚಿಕೆಯಲ್ಲಾಗಿರುವ ಭ್ರಷ್ಟಾಚಾರ ತನಗೆ ಸಂಬಂಧವಿಲ್ಲ ಅಂತ ಮಂತ್ರಿಯೇ ಹೇಳಿದರೆ ಹೇಗೆ? ಇಂಥ ಬೇಜವಾಬ್ದಾರಿ ಸಚಿವ ಮತ್ತು ಸರ್ಕಾರವನ್ನು ಮೊದಲ್ಯಾವತ್ತೂ ನೋಡಿರಲಿಲ್ಲ, ಬಿಅರ್ ಪಾಟೀಲ್ ಅರೋಪ ಮಾಡಿ 15 ದಿನ ಕಳೆದರೂ ಒಬ್ಬೇಒಬ್ಬ ಅಧಿಕಾರಿಯನ್ನು ಟ್ರಾನ್ಸ್ಫರ್ ಮಾಡುವ ಕೆಲಸ ನಡೆದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಗದಗ, ಜೂನ್ 27: ಬಿಜೆಪಿ ರಾಜ್ಯ ಘಟಕದಲ್ಲಿ (state BJP unit) ಯಾವುದೇ ಗೊಂದಲವಿಲ್ಲ, ರಾಜ್ಯದಲ್ಲಿ ಯಾವುದಾದರೂ ಗೊಂದಲರಹಿತ ಪಕ್ಷ ಇರೋದಾದರೆ ಅದು ಬಿಜೆಪಿ ಮಾತ್ರ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗುತ್ತಾರೆಯೇ ಎಂಬ ಪ್ರಶ್ನೆಯನ್ನು ಕೇಳಬೇಡಿ, ರಾಜಕೀಯ ಹೇಳಿಕೆಗಳಿಗೆ ಪ್ರತಿ ಹೇಳಿಕೆಗೆ ನೀಡುವುದು ಜಾಯಮಾನ ನನ್ನದಲ್ಲ, ಆದರೆ ಒಂದು ಮಾತು ಮಾತ್ರ ಸತ್ಯ, ಪಕ್ಷದ ರಾಷ್ಟ್ರಾಧ್ಯಕ್ಷರ ಮತ್ತ್ತು ರಾಜ್ಯಾಧ್ಯಕ್ಷರ ಆಯ್ಕೆ ಇಷ್ಟರಲ್ಲೇ ನಡೆಯಲಿದೆ ಎಂದು ಹೇಳಿದರು. ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯೆಂದು ಯಾವತ್ತೂ ಹೇಳಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: Delhi Assembly Poll Results; ಸಮಾಜದ ಎಲ್ಲ ವರ್ಗದವರು ಬಿಜೆಪಿಗೆ ವೋಟು ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ