Delhi Assembly Poll Results; ಸಮಾಜದ ಎಲ್ಲ ವರ್ಗದವರು ಬಿಜೆಪಿಗೆ ವೋಟು ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ
ದೆಹಲಿ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ಮತ್ತಷ್ಟು ಶಕ್ತಿಶಾಲಿ ಪಕ್ಷವಾಗಲಿರೋದು ಸ್ಪಷ್ಟವಾಗುತ್ತದೆ. ಮತ್ತ್ತೊಂದು ಗಮನಾರ್ಹ ಸಂಗತಿಯೆಂದರೆ ಇಂಡಿ ಒಕ್ಕೂಟದಲ್ಲಿ ನಾಯಕತ್ವದ ಸಮಸ್ಯೆ ತಲೆದೋರಲಿದೆ. ಹಾಗೆ ನೋಡಿದರೆ ಒಕ್ಕೂಟಕ್ಕೆ ಮೊದಲಿನಿಂದಲೂ ಲೀಡರ್ಶಿಪ್ ಕ್ರೈಸಿಸ್ ಇದೆ, ಇನ್ನು ಮೇಲೆ ಅದು ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಯಶಸ್ಸಿಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಬಸವರಾಜ ಬೊಮ್ಮಾಯಿ, ದೆಹಲಿ ನಗರದ ನಿವಾಸಿಗಳಲ್ಲಿ ಬಡವರು, ಕಡಿಮೆ ಆದಾಯ ಇರುವವರು, ಮಧ್ಯಮವರ್ಗದವರು, ವ್ಯಾಪಾರಸ್ಥರು ಸೇರಿದಂತೆ ನಗರದ ಹೊರಭಾಗಗಳಲ್ಲಿ ವಾಸವಾಗಿರುವ ಜನ ಮತ್ತು ಗ್ರಾಮೀಣ ಭಾಗದ ರೈತರು ಬಿಜೆಪಿ ಪರ ವೋಟ್ ಮಾಡಿ ಗೆಲ್ಲಿಸಿದ್ದಾರೆ, ಇವರ ಜೊತೆ ಪೂರ್ವಾಂಚಲದಿಂದ ಬಂದು ದೆಹಲಿಯಲ್ಲಿ ನೆಲೆಸಿರುವ ವಲಸೆಗಾಗರರು ಸಹ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು. ಮುಸಲ್ಮಾನರು ಶೇಕಡ 20ಕ್ಕಿಂತ ಹೆಚ್ಚಿರುವ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ, ಅದರ ಅರ್ಥ ಈ ಸಮುದಾಯದವರೂ ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 08, 2025 04:32 PM