Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Assembly Poll Results: ಪಕ್ಷದ ಯಶಸ್ಸು ಮತ್ತು ನನ್ನ ಗೆಲುವಿನ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ: ಪರ್ವೇಶ್ ವರ್ಮಾ

Delhi Assembly Poll Results: ಪಕ್ಷದ ಯಶಸ್ಸು ಮತ್ತು ನನ್ನ ಗೆಲುವಿನ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ: ಪರ್ವೇಶ್ ವರ್ಮಾ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 08, 2025 | 4:24 PM

Delhi Assembly Poll Results: ಎರಡು ಬಾರಿ ಸಂಸದರಾಗಿದ್ದ ಪರ್ವೇಶ್ ವರ್ಮಾ ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾಗುತ್ತಿದೆ. ಈಗ ಅವರು ಅರವಿಂದ್ ಕೇಜ್ರಿವಾಲ್ ರನ್ನು ಸೋಲಿಸಿರುವುದರಿಂದ ಸಿಎಂ ಕುರ್ಚಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇವರ ಕುಟುಂಬ ರಾಜಕೀಯ ಕ್ಷೇತ್ರದಲ್ಲಿದ್ದು ತಂದೆ ಸಾಹಿಬ್ ಸಿಂಗ್ ವರ್ಮಾ ಅವರು ಹಿಂದೆ ದೆಹಲಿಯ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರ ಚಿಕ್ಕಪ್ಪ ಎಂಸಿಡಿಯ ಸದಸ್ಯರಾಗಿದ್ದರು.

ದೆಹಲಿ: ಪರ್ವೇಶ್ ವರ್ಮಾ ಅವರನ್ನು ದೆಹಲಿಯಲ್ಲಿ ದೈತ್ಯ ಸಂಹಾರಿ ಎಂದು ಬಣ್ಣಿಸಲಾಗುತ್ತಿದೆ, ಯಾಕೆ ಅಂತ ಎಲ್ಲರಿಗೂ ಗೊತ್ತು. ನಾಲ್ಕನೇ ಬಾರಿ ದೆಹಲಿಯು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ವರ್ಮಾ ಸೋಲುಣಿಸಿದ್ದಾರೆ. ದೆಹಲಿಯಲ್ಲಿ ತಮ್ಮ ಗೆಲುವಿನ ಶ್ರೇಯಸ್ಸು ಹಾಗೂ ಪಕ್ಷದ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ಪರ್ವೇಶ್ ವರ್ಮಾ ತನ್ನ ಪರವಾಗಿ ಮತ ಚಲಾಯಿಸಿದ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸಿದರು. ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯ ಅಭಿವೃದ್ಧಿ ಕುಂಠಿತಗೊಂಡಿತ್ತು ಅದರೆ ಸರಕಾರ ರಚಿಸಲಿರುವ ಬಿಜೆಪಿಯು ಪ್ರಧಾನಿ ಮೋದಿಯವರ ವಿಶನ್ ಅನ್ನು ಕಾರ್ಯರೂಪಕ್ಕೆ ತರಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Delhi Assembly Polls Results: ಬಿಜೆಪಿಗೆ ಭರ್ಜರಿ ಗೆಲುವು, ಬೆಂಗಳೂರಲ್ಲಿ ಪಟಾಕಿ ಸಿಡಿಸಿ, ಡೋಲು ಬಾರಿಸುತ್ತ ಸಂಭ್ರಮಿಸಿದ ನಾಯಕರು

Published on: Feb 08, 2025 03:12 PM