Delhi Assembly Polls Results: ಬಿಜೆಪಿಗೆ ಭರ್ಜರಿ ಗೆಲುವು, ಬೆಂಗಳೂರಲ್ಲಿ ಪಟಾಕಿ ಸಿಡಿಸಿ, ಡೋಲು ಬಾರಿಸುತ್ತ ಸಂಭ್ರಮಿಸಿದ ನಾಯಕರು
ಹಿರಿಯ ವ್ಯಕ್ತಿಯೊಬ್ಬರು ಉಳಿವರಿಗಿಂತ ಹೆಚ್ಚು ಸಂಭ್ರಮಿಸಿದರೆಂದರೆ ಉತ್ಪ್ರೇಕ್ಷೆ ಅನಿಸಲಾರದು. ಅವರು ಕುಣಿಯುವುದನ್ನು ನಿಲ್ಲಿಸುವುದೇ ಇಲ್ಲ. ಅವರು ತೋರಿಕೆಗಾಗಿ ಕುಣಿಯದೆ ಮನಸಾರೆ ಮತ್ತ್ತು ಖುಷಿಯಿಂದ ಕುಣಿಯುತ್ತಿದ್ದಾರೆ. ಇತ್ತೀಚಿಗೆ ಸಾರ್ವಜನಿಕವಾಗಿ ಬಹಳ ಕಡಿಮೆ ಕಾಣಿಸಿಕೊಳ್ಳುತ್ತಿರುವ ಮುನಿರತ್ನ ಪಟಾಕಿ ಸಿಡಿಸುತ್ತ ಸಂಭ್ರಮಿಸಿದರು ಮತ್ತು ಆಶೋಕ, ರವಿ ಜೊತೆ ಡೋಲು ಬಾರಿಸಿದರು.
ಬೆಂಗಳೂರು: ಬಣ ಬಡಿದಾಟ, ನಾಯಕರ ನಡುವೆ ಕಚ್ಚಾಟ, ಮುಸುಕಿನ ಗುದ್ದಾಟ ಮೊದಲಾದವುಗಳಿಂದ ಬಸವಳಿದಿದ್ದ ರಾಜ್ಯ ಬಿಜೆಪಿ ಘಟಕಕ್ಕೆ ಸಂಭ್ರಮಿಸಲು ಕಾರಣವೊಂದು ಸಿಕ್ಕಿದೆ. ದೆಹಲಿಯಲ್ಲಿ ಪಕ್ಷಕ್ಕೆ ಭಾರೀ ಗೆಲುವು ದಕ್ಕಿದೆ ಮತ್ತು ಸುಮಾರು ಎರಡೂವರೆ ದಶಕಗಳ ನಂತರ ಅದು ಅಧಿಕಾರಕ್ಕೆ ಬರುತ್ತಿದೆ. ಬೆಂಗಳೂರಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ, ವಿಧಾನ ಪರಿಷತ್ ನಲ್ಲಿ ವಿಪಕ್ಷ ನಾಯಕ ನಾರಾಯಣಸ್ವಾಮಿ ಚಲವಾದಿ, ವಿಪ ಸದಸ್ಯ ಸಿಟಿ ರವಿ, ಸಂಸದ ಪಿಸಿ ಮೋಹನ್, ಶಾಸಕಕ ಮುನಿರತ್ನ ನಾಯ್ಡು ಮೊದಲಾದವರೆಲ್ಲ ಪಟಾಕಿ ಸಿಡಿಸಿ ಡೋಲು ಬಾರಿಸಿ ವಿಜಯೋತ್ಸವ ಆಚರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Arvind Kejriwal: ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ
Published on: Feb 08, 2025 01:35 PM