Sign In

By signing in or creating an account, you agree with Associated Broadcasting Company's Terms & Conditions and Privacy Policy.

Arvind Kejriwal: ದೆಹಲಿ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ

Delhi Election Result 2025: ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಎಎಪಿ ಪರಿಷ್ಠ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದೆ. ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಅವರಿಗೆ ಸೋಲಾಗಿದೆ. ಇದು ಎಎಪಿಗೆ ಅರಗಿಸಿಕೊಳ್ಳಲಾರದ ತುತ್ತಾಗಿ ಪರಿಣಮಿಸಿದೆ. ಅಬಕಾರಿ ಹಗರಣ ಹಾಗೂ ಭ್ರಷ್ಟಾಚಾರ ಆರೋಪಗಳು ಕೇಜ್ರಿವಾಲ್ ಸೋಲಿಗೆ ಪ್ರಮುಖ ಕಾರಣಗಳು ಎನ್ನಲಾಗುತ್ತಿದೆ.

Arvind Kejriwal: ದೆಹಲಿ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ
ಅರವಿಂದ್​ ಕ್ರೇಜಿವಾಲ್
Follow us
Ganapathi Sharma
|

Updated on:Feb 08, 2025 | 3:53 PM

ನವದೆಹಲಿ, ಫೆಬ್ರವರಿ 08: ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಇದರೊಂದಿಗೆ ಆಡಳಿತಾರೂಢ ಎಎಪಿಗೆ ಹಾಗೂ ಕೇಜ್ರಿವಾಲ್​ಗೆ ಭಾರೀ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್​ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ.

ಅರವಿಂದ ಕೇಜ್ರಿವಾಲ್ ಅವರಿಗೆ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂದೀಪ್ ದೀಕ್ಷಿತ್ ಮೂರನೇ ಸ್ಥಾನದಲ್ಲಿದ್ದಾರೆ.

ಯಾರಿಗೆ ಎಷ್ಟು ಮತ?

ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ದೊರೆತ ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ 30,088 ಮತಗಳನ್ನು ಪಡೆದರೆ, ಕೇಜ್ರಿವಾಲ್ ಪರ 25,999 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದಿದ್ದಾರೆ. ಕೇಜ್ರಿವಾಲ್​ ಅವರಿಗೆ 4,089 ಮತಗಳ ಅಂತರದ ಸೋಲಾಗಿದೆ.

ಕೇಜ್ರಿವಾಲ್ ಸೋಲಿಗೆ ಕಾರಣಗಳೇನು?

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಹೊರಹೊಮ್ಮಿತ್ತು. ಆದರೆ ಕೇವಲ 10 ವರ್ಷಗಳ ನಂತರ, ಪಕ್ಷದ ಉನ್ನತ ನಾಯಕರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದವು. ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಜೈಲಿಗೆ ಹೋಗಬೇಕಾಯಿತು. ತಮ್ಮ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳನ್ನು ಸುಳ್ಳೆಂದು ಪ್ರಬಲವಾಗಿ ಜನರ ಮುಂದಿಡುವಲ್ಲಿ ಅವರು ವಿಫಲರಾದರು. ಇದು ಸೋಲಿಗೆ ಪ್ರಮುಖ ಕಾರಣ ಎಂದು ದೆಹಲಿ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ಕೇಜ್ರಿವಾಲ್ ಗೆಲುವಿನ ಓಟಕ್ಕೆ ಬ್ರೇಕ್

ಅರವಿಂದ ಕೇಜ್ರಿವಾಲ್ 2013 ರಲ್ಲಿ ಮೊದಲ ಬಾರಿಗೆ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಅಂದಿನ ದೆಹಲಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ನಂತರ ಅವರು 2015 ಮತ್ತು 2020 ರ ಚುನಾವಣೆಗಳಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ಇದರೊಂದಿಗೆ, ಕೇಜ್ರಿವಾಲ್ ಅವರ ದಶಕದ ಆಡಳಿತಕ್ಕೆ ತೆರೆ ಬಿದ್ದಂತಾಗಿದೆ.

ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಎಎಪಿ ಸೋಲಿಗೆ ಕಾರಣಗಳು ಇಲ್ಲಿವೆ ನೋಡಿ

ಈ ಮಧ್ಯೆ, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಪರ್ವೇಶ್ ವರ್ಮಾ ಮಾತನಾಡಿ, ನವದೆಹಲಿ ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸಿದರು. ದೆಹಲಿಯಲ್ಲಿ ‘ಡಬಲ್ ಎಂಜಿನ್’ ಸರ್ಕಾರದ ಬಗ್ಗೆ ಮಾತನಾಡಿದರು. ಕೇಂದ್ರದಲ್ಲಿ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಉಲ್ಲೇಖಿಸಿ, ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Sat, 8 February 25

ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ವಿಜಯೇಂದ್ರ ಫೋರ್ಜರಿ ಮಾಡಿದ್ದು ಸತ್ಯ ಅಂತ ಈಗಲೂ ಹೇಳುತ್ತೇನೆ: ಯತ್ನಾಳ್
ವಿಜಯೇಂದ್ರ ಫೋರ್ಜರಿ ಮಾಡಿದ್ದು ಸತ್ಯ ಅಂತ ಈಗಲೂ ಹೇಳುತ್ತೇನೆ: ಯತ್ನಾಳ್
‘ಅಪ್ಪು’ ಅದ್ದೂರಿ ಮರು ಬಿಡುಗಡೆ; ಫ್ಯಾನ್ಸ್ ಸಂಭ್ರಮ ಕಣ್ತುಂಬಿಕೊಂಡ ಯುವ
‘ಅಪ್ಪು’ ಅದ್ದೂರಿ ಮರು ಬಿಡುಗಡೆ; ಫ್ಯಾನ್ಸ್ ಸಂಭ್ರಮ ಕಣ್ತುಂಬಿಕೊಂಡ ಯುವ
ಮಗಳಿಗೆ ಹೊಟ್ಟೆನೋವಿನ ಸಮಸ್ಯೆ ಇತ್ತೆಂದ ತಂದೆ ಶಿವಕುಮಾರ್
ಮಗಳಿಗೆ ಹೊಟ್ಟೆನೋವಿನ ಸಮಸ್ಯೆ ಇತ್ತೆಂದ ತಂದೆ ಶಿವಕುಮಾರ್
ಅಮೆರಿಕದ ಏರ್​ಪೋರ್ಟ್​ನಲ್ಲಿ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
ಅಮೆರಿಕದ ಏರ್​ಪೋರ್ಟ್​ನಲ್ಲಿ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
‘ಅಪ್ಪು’ ಸಿನಿಮಾಗೆ ದರ್ಶನ್ ಅಭಿಮಾನಿ ಬೆಂಬಲ; ವಿಶೇಷ ಕಲಾಕೃತಿ ತಂದ ಫ್ಯಾನ್
‘ಅಪ್ಪು’ ಸಿನಿಮಾಗೆ ದರ್ಶನ್ ಅಭಿಮಾನಿ ಬೆಂಬಲ; ವಿಶೇಷ ಕಲಾಕೃತಿ ತಂದ ಫ್ಯಾನ್
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ