ಹಣ, ಅಧಿಕಾರ ಅರವಿಂದ ಕೇಜ್ರಿವಾಲ್ರನ್ನು ಬದಲಿಸಿತೇ? ಅಣ್ಣಾ ಹಜಾರೆ ಹೇಳಿದ್ದೇನು ನೋಡಿ
Delhi election Result 2025: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿದ್ದಾರೆ. ದೆಹಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಬಗ್ಗೆಯೂ ಅವರು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅಣ್ಣಾ ಹಜಾರೆ ಹೇಳಿದ್ದೇನು ಎಂಬುದನ್ನು ಇಲ್ಲಿರುವ ವಿಡಿಯೋದಲ್ಲಿ ನೋಡಿ.
ದೆಹಲಿ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿದ್ದಾರೆ. ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಪಕ್ಷದ ಬಗ್ಗೆ ಮಾತನಾಡಿದ ಅವರು, ಹಗರಣಗಳು ಹಾಗೂ ನಡತೆಯಿಂದಾಗಿ ಎಎಪಿಗೆ ಸೋಲಾಯಿತು ಎಂದು ವಿಶ್ಲೇಷಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅಭ್ಯರ್ಥಿಯ ವರ್ಚಸ್ಸಿಗ ಯಾವುದೇ ಧಕ್ಕೆಯಾಗುವಂತೆ ಇರಬಾರದು. ಒಳ್ಳೆಯ ಗುಣನಡತೆಯನ್ನು ಹೊಂದಿರಬೇಕು ಎಂದು ನಾನು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇನೆ. ಆದರೆ, ಅವರು (ಎಎಪಿ) ಅದನ್ನು ಹೊಂದಿರಲಿಲ್ಲ. ಅವರು ಮದ್ಯ ಮತ್ತು ಹಗರಣದಲ್ಲಿ ಸಿಕ್ಕಿಹಾಕಿಕೊಂಡರು. ಅವರ (ಅರವಿಂದ್ ಕೇಜ್ರಿವಾಲ್) ವರ್ಚಸ್ಸು ಆ ಕಾರಣದಿಂದಾಗಿ ಕುಗ್ಗಿತು ಮತ್ತು ಅದಕ್ಕಾಗಿಯೇ ಅವರು ಚುನಾವಣೆಯಲ್ಲಿ ಕಡಿಮೆ ಮತಗಳನ್ನು ಪಡೆದರು. ಜನರು ಅವರು (ಅರವಿಂದ್ ಕೇಜ್ರಿವಾಲ್) ಗುಣನಡತೆಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಮದ್ಯ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಭಾವಿಸಿದ್ದಾರೆ. ರಾಜಕೀಯದಲ್ಲಿ, ಆರೋಪಗಳನ್ನು ಮಾಡಲಾಗುತ್ತದೆ. ಆಗ ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕು. ಸತ್ಯವು ಸತ್ಯವಾಗಿ ಉಳಿಯುತ್ತದೆ. ಸಭೆ ನಡೆದಾಗ, ನಾನು ಪಕ್ಷದ ಭಾಗವಾಗುವುದಿಲ್ಲ ಎಂದು ನಿರ್ಧರಿಸಿದೆ – ಮತ್ತು ನಾನು ಆ ದಿನದಿಂದ ದೂರ ಉಳಿದಿದ್ದೇನೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ