ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
‘ಎಕ್ಸ್ ಆ್ಯಂಡ್ ವೈ’ ಸಿನಿಮಾ ಯುವಜನರ ಗಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಉತ್ತಮ ಆರಂಭ ಹಾಗೂ ನೋಡುಗರ ಪ್ರಶಂಸೆ ಪಡೆದ ನಂತರ, ಚಿತ್ರತಂಡವು ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರ ನೇತೃತ್ವದಲ್ಲಿ ಮುಖ್ಯ ಕಲಾವಿದರಾದ ಬೃಂದಾ ಆಚಾರ್ಯ, ಅಯನಾ ಹಾಗೂ ಸಂಗೀತ ನಿರ್ದೇಶಕ ಹರ್ಷ ಅವರು ‘ಕೋಗಿಲು’ವಿನಲ್ಲಿ ಇರುವ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು.
‘ಎಕ್ಸ್ ಆ್ಯಂಡ್ ವೈ’ ಸಿನಿಮಾ (X & Y Kannada Cinema) ಯುವಜನರ ಗಮನ ಸೆಳೆಯುತ್ತಿದೆ. ಬಾಕ್ಸ್ ಆಫೀಸಿನಲ್ಲಿ ಉತ್ತಮ ಆರಂಭ ಮತ್ತು ನೋಡುಗರ ಪ್ರಶಂಸೆ ಪಡೆದಿದೆ. ಈಗ ಚಿತ್ರತಂಡವು ನಿರ್ದೇಶಕ ಡಿ. ಸತ್ಯ ಪ್ರಕಾಶ್ ಅವರ ನೇತೃತ್ವದಲ್ಲಿ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿಗೆ (Presidency College) ಭೇಟಿ ನೀಡಿದೆ. ಮುಖ್ಯ ಕಲಾವಿದರಾದ ಬೃಂದಾ ಆಚಾರ್ಯ, ಅಯನಾ ಹಾಗೂ ಸಂಗೀತ ನಿರ್ದೇಶಕ ಹರ್ಷ ಅವರು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು. ಕಾಲೇಜಿನಲ್ಲಿ ನಡೆದ ‘ಉಡಾನ್’ ಫ್ರೆಶರ್ಸ್ ಡೇ (Freshers Day) ಕಾರ್ಯಕ್ರಮವು X&Y ಚಿತ್ರದ ತಂಡದ ಉಪಸ್ಥಿತಿಯಿಂದ ಮತ್ತಷ್ಟು ಉತ್ಸಾಹಭರಿತವಾಯಿತು. ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಉಪಾಧ್ಯಕ್ಷರಾದ ಸಲ್ಮಾನ್ ಅಹ್ಮದ್ ಅವರು ಚಿತ್ರತಂಡವನ್ನು ಅಭಿನಂದಿಸಿ, ವಿದ್ಯಾರ್ಥಿಗಳೊಂದಿಗೆ ಸಂತಸದಿಂದ ಪಾಲ್ಗೊಂಡು ಈ ದಿನವನ್ನು ಸ್ಮರಣೀಯವನ್ನಾಗಿ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.