‘ರಾಮಾ ರಾಮಾ ರೇ’ ನಿರ್ದೇಶಕ ಸತ್ಯ ಪ್ರಕಾಶ್ ಈಗ ಹೀರೋ; ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚಿದ ಡೈರೆಕ್ಟರ್
‘ರಾಮಾ ರಾಮಾ ರೇ’ ಬಳಿಕ ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಅವರು ಹಲವು ಸಿನಿಮಾಗಳನ್ನು ಹಂಚಿಕೆ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಸಹ ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಇತ್ತೀಚಿನ ವರ್ಷಗಳಲ್ಲಿ ಹಲವರು ನಿರ್ದೇಶನದ ಜೊತೆ ನಟನೆಯಲ್ಲೂ ತೊಡಗಿಕೊಂಡಿದ್ದಾರೆ. ಈ ಸಾಲಿನಲ್ಲಿ ಯೋಗರಾಜ್ ಭಟ್ ಸೇರಿ ಅನೇಕರಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ನಿರ್ದೇಶಕ ಡಿ. ಸತ್ಯ ಪ್ರಕಾಶ್. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರಾಗಿರುವ ಸತ್ಯ ಪ್ರಕಾಶ್ (Satya Prakash) ನಟನೆಗೆ ಕಾಲಿಟ್ಟಿದ್ದಾರೆ. ‘ರಾಮಾ ರಾಮಾ ರೇ’ ಮೂಲಕ ನಿರ್ದೇಶನಕ್ಕೆ ಇಳಿದ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ಅವರು ಒಂದು ಪಾತ್ರ ಮಾಡುತ್ತಿದ್ದಾರೆ.
‘ರಾಮಾ ರಾಮಾ ರೇ’ ಬಳಿಕ ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಅವರು ಹಲವು ಸಿನಿಮಾಗಳನ್ನು ಹಂಚಿಕೆ ಕೂಡ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಸಹ ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಫ್ಯಾಂಟಸಿ ಹಾಗೂ ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡು ಸತ್ಯ ಪ್ರಕಾಶ್ ಸಿನಿಮಾ ಮಾಡಲಿದ್ದಾರೆ. ಸಿನಿಮಾದಲ್ಲಿ ಹಾಸ್ಯವನ್ನು ಕೂಡ ಅವರು ಬೆರೆಸಿದ್ದು, ನಕ್ಕು ನಗಿಸುವ ವಿಷಯಗಳು ಸಾಕಷ್ಟು ಇವೆ ಅನ್ನೋದು ಸತ್ಯ ಪ್ರಕಾಶ್ ಅಭಿಪ್ರಾಯ. ಈ ಚಿತ್ರದಲ್ಲಿ ಸತ್ಯ ಪ್ರಕಾಶ್ ಜತೆಗೆ ಅಥರ್ವ ಪ್ರಕಾಶ್ ಹೆಸರಿನ ಯುವಕ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಅಥರ್ವ ಪ್ರಕಾಶ್ ಅವರಿಗೆ ಚಿತ್ರರಂಗದ ಜೊತೆ ನಂಟಿದೆ. ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದಲ್ಲಿ ಅಥರ್ವ ಪ್ರಕಾಶ್ ಅವರು ಒಂದು ಪಾತ್ರ ಮಾಡಿದ್ದರು. ಈ ಚಿತ್ರವನ್ನು ಸತ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸತ್ಯ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
ಸತ್ಯ ಪ್ರಕಾಶ್ ಅವರ ಈ ಹಿಂದಿನ ಚಿತ್ರಗಳಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರು ಈ ಸಿನಿಮಾದಲ್ಲೂ ಮುಂದುವರಿಯಲಿದ್ದಾರೆ. ಕನ್ನಡ ಚಿತ್ರರಂಗದ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಟೀಸರ್ ಮೂಲಕ ಟೈಟಲ್ ರಿವೀಲ್ ಮಾಡಲು ಪ್ಲ್ಯಾನ್ ನಡೆದಿದೆ.
ಇದನ್ನೂ ಓದಿ: ‘ಲವ್ ಮಾಕ್ಟೇಲ್ 2’ ನಟಿ ರೇಚಲ್ ಡೇವಿಡ್ ಹೊಸ ಚಿತ್ರ ಅನೌನ್ಸ್; ಮಿಲಿಂದ್ ಹೀರೋ, ಸತ್ಯ ಪ್ರಕಾಶ್ ನಿರ್ಮಾಣ
‘ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಈ ಸಿನಿಮಾದಲ್ಲಿ ಎರಡು ಮುಖ್ಯ ಪಾತ್ರಗಳು ಬರುತ್ತವೆ. ಒಂದನ್ನು ನಾನೇ ಮಾಡುತ್ತಿದ್ದೇನೆ. ಈ ಪಾತ್ರಕ್ಕೆ ನಾನು ಸೂಕ್ತ ಎಂದು ಅನಿಸಿದ ಬಳಿಕವೇ ನಟನಾಗಲು ನಿರ್ಧರಿಸಿದೆ’ ಎಂದಿರುವ ಸತ್ಯ ಪ್ರಕಾಶ್ ಅವರು ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Wed, 4 October 23