ಈ ವಾರ ಯಾವೆಲ್ಲಾ ಸಿನಿಮಾ ರಿಲೀಸ್? ಕೊನೇ ಬಾರಿ ಚಿರುನ ದೊಡ್ಡ ಪರದೆ ಮೇಲೆ ನೋಡುವ ಅವಕಾಶ
ದೊಡ್ಡ ಬಜೆಟ್ ಚಿತ್ರಗಳ ಜೊತೆ ಸಣ್ಣ ಬಜೆಟ್ನ ಚಿತ್ರಗಳೂ ಸದ್ದು ಮಾಡುತ್ತವೆ. ಈ ಶುಕ್ರವಾರ (ಅಕ್ಟೋಬರ್ 6) ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಸಾಕಷ್ಟು ವೀಶೇಷ ಎನಿಸಿಕೊಂಡಿದೆ. ಅವರು ನಟಿಸಿದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ರಿಲೀಸ್ ಆಗುತ್ತಿದೆ. ಇದರ ಜೊತೆ ಮತ್ತೆ ಯಾವೆಲ್ಲ ಸಿನಿಮಾಗಳು ರಿಲೀಸ್ ಆಗುತ್ತಿವೆ ಅನ್ನುವ ಬಗ್ಗೆ ಇಲ್ಲಿದೆ ವಿವರ.
ಶುಕ್ರವಾರ ಬಂತು ಎಂದರೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚುತ್ತದೆ. ಯಾವ ಸಿನಿಮಾ ರಿಲೀಸ್ ಆಗುತ್ತದೆ ಎಂದು ಕಾದು ಕೂತಿರುತ್ತಾರೆ. ದೊಡ್ಡ ಬಜೆಟ್ ಚಿತ್ರಗಳ ಜೊತೆ ಸಣ್ಣ ಬಜೆಟ್ನ ಚಿತ್ರಗಳೂ ಸದ್ದು ಮಾಡುತ್ತವೆ. ಈ ಶುಕ್ರವಾರ (ಅಕ್ಟೋಬರ್ 6) ಚಿರಂಜೀವಿ ಸರ್ಜಾ ಅಭಿಮಾನಿಗಳಿಗೆ ಸಾಕಷ್ಟು ವೀಶೇಷ ಎನಿಸಿಕೊಂಡಿದೆ. ಅವರು ನಟಿಸಿದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ರಿಲೀಸ್ ಆಗುತ್ತಿದೆ. ಇದರ ಜೊತೆ ಮತ್ತೆ ಯಾವೆಲ್ಲ ಸಿನಿಮಾಗಳು ರಿಲೀಸ್ ಆಗುತ್ತಿವೆ ಅನ್ನುವ ಬಗ್ಗೆ ಇಲ್ಲಿದೆ ವಿವರ.
ರಾಜಮಾರ್ತಾಂಡ
ಚಿರಂಜೀವಿ ಸರ್ಜಾ ಮೃತಪಟ್ಟು ಕೆಲವು ವರ್ಷ ಕಳೆದಿದೆ. ಅವರು ನಟಿಸಿದ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಧ್ರುವ ಸರ್ಜಾ ಜನ್ಮದಿನದ ಪ್ರಯುಕ್ತ ಈ ಸಿನಿಮಾ ಬಿಡುಗಡೆ ಆಗುತ್ತಿದೆ ಅನ್ನೋದು ವಿಶೇಷ. ಚಿರಂಜೀವಿ ಪಾತ್ರಕ್ಕೆ ಧ್ರುವ ಸರ್ಜಾ ಅವರೇ ಡಬ್ ಮಾಡಿದ್ದಾರೆ. ಈ ಚಿತ್ರವನ್ನು ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ.
ಫೈಟರ್
ವಿನೋದ ಪ್ರಭಾಕರ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರು ‘ಫೈಟರ್’ ಸಿನಿಮಾ ಮೂಲಕ ಬರುತ್ತಿದ್ದಾರೆ. ಅವರ ಜೊತೆ ಲೇಖಾ ಚಂದ್ರಾ, ಪಾವನಾ ಗೌಡ, ರಾಜೇಶ್ ನಟರಂಗ ಮೊದಲಾದವರು ನಟಿಸಿದ್ದಾರೆ. ನೂತನ್ ಉಮೇಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗುರು ಕಿರಣ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಲವ್
ಹೊಸಬರೇ ಮಾಡಿರುವ ‘ಲವ್’ ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಪ್ರಜಯ್ ಜಯರಾಮ್, ವೃಷಾ ಪಾಟೀಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮಹೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಅಭಿರಾಮಚಂದ್ರ
ಮತ್ತೊಂದು ಹೊಸಬರ ತಂಡ ‘ಅಭಿರಾಮಚಂದ್ರ’ ರಿಲೀಸ್ ಆಗುತ್ತಿದೆ. ರಥ ಕಿರಣ್, ಸಿದ್ದು ಮೂಲಿಮನಿ, ಶಿವಾನಿ ರೈ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: ರಾಜಮಾರ್ತಾಂಡ ಚಿರು ಬಗ್ಗೆ ಪತ್ನಿ ಮೇಘನಾ ಭಾವುಕ ಮಾತು
ಆಡೇ ನಮ್ ಗಾಡ್
ನಟರಾಜ್ ಭಟ್, ಅಜಿತ್ ಬೊಪ್ಪನಳ್ಳಿ, ಮಂಜುನಾಥ್ ಜಂಬೆ ಮೊದಲಾದವರು ‘ಆಡೇ ನಮ್ ಗಾಡ್’ ಚಿತ್ರದಲ್ಲಿ ನಟಿಸಿದ್ದಾರೆ. ಪಿ.ಎಚ್ ವಿಶ್ವನಾಥ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಬಿ. ಬಸವರಾಜ್, ರೇಣುಕಾ ಬಸವರಾಜ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇದಲ್ಲದೆ, ‘ಮಿಸ್ಟರ್ ಆ್ಯಂಡ್ ಮಿಸಸ್ ಮನ್ಮಥ’, ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್’, ಮುತ್ತಯ್ಯ ಮುರಳೀಧರನ್ ಬಯೋಪಿಕ್ ‘800’ ಮೊದಲಾದ ಸಿನಿಮಾಗಳು ರಿಲೀಸ್ ಆಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ