ಶುಭ ಸುದ್ದಿ ಕೊಡಲಿರುವ ದಿವ್ಯಾ ಉರುಡುಗ: ಮದುವೆ ಅಥವಾ ಸಿನಿಮಾ?

Divya Uruduga: ರೇಷ್ಮೆ ಸೀರೆಯುಟ್ಟು, ಮಲ್ಲಗೆ ಮುಡಿದು ಅಂದವಾಗಿ ರೆಡಿಯಾಗಿರುವ ದಿವ್ಯಾ ಉರುಡುಗ ಶುಭ ಸುದ್ದಿಯೊಂದನ್ನು ನೀಡಲಿದ್ದಾರೆ. ಏನದು? ಅಭಿಮಾನಿಗಳಿಗೆ ಕಾತುರವಿದೆ.

ಶುಭ ಸುದ್ದಿ ಕೊಡಲಿರುವ ದಿವ್ಯಾ ಉರುಡುಗ: ಮದುವೆ ಅಥವಾ ಸಿನಿಮಾ?
ದಿವ್ಯಾ ಉರುಡುಗ
Follow us
ಮಂಜುನಾಥ ಸಿ.
|

Updated on: Oct 05, 2023 | 6:19 PM

ಬಿಗ್​ಬಾಸ್ (Bigg Boss), ಕಿರುತೆರೆ, ಸಿನಿಮಾಗಳ ಮೂಲಕ ಗಮನ ಸೆಳೆದಿರುವ ದಿವ್ಯಾ ಉರುಡುಗ (Divya Uruduga) ಗುಡ್​ನ್ಯೂಸ್ ಒಂದನ್ನು ಕೊಡುತ್ತಿದ್ದಾರೆ. ಬಿಗ್​ಬಾಸ್​ನಲ್ಲಿ ಸಹ ಸ್ಪರ್ಧಿ ಆಗಿದ್ದ ಅರವಿಂದ್ ಜೊತೆ ಪ್ರೀತಿಯಲ್ಲಿರುವ ದಿವ್ಯಾ ಮದುವೆ ಆಗುತ್ತಿದ್ದಾರೆಯೇ? ಅಥವಾ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆಯೇ? ಒಟ್ಟಿನಲ್ಲಿ ಒಂದು ಹೊಸ ಖುಷಿ ಸುದ್ದಿ ಜೊತೆಗೆ ದಿವ್ಯಾ ಬರುತ್ತಿದ್ದಾರೆ.

ದಿವ್ಯಾ ಉರುಡುಗ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ… ಮದುಮಗಳ ಹಾಗೆ ಕಂಗೊಳಿಸುತ್ತಿರುವ ದಿವ್ಯಾ, ತನ್ನ ಸಹವರ್ತಿಗಾಗಿ ಕಾಯುತ್ತಿದ್ದಾರೆ. ನೀವು ಬರದೇ ಇದ್ದರೆ ನಾನೇ ಅನೌನ್ಸ್ ಮಾಡಿಬಿಡುತ್ತೇನೆ ಎಂದು ಪ್ರೀತಿಪೂರ್ವಕ ಬೆದರಿಕೆಯನ್ನೂ ಹಾಕಿದ್ದಾರೆ. ವಿಡಿಯೋ ನೋಡಿದ್ರೆ ಪಕ್ಕಾ ಮದುವೆ ಸುದ್ದಿ ನೀಡುತ್ತಾರೆ ಎನ್ನುವ ಅನುಮಾನ ಮೂಡಿದೆ. ಆದರೆ ಮದುವೆ ಘೋಷಣೆಯಂತೆ ಕಾಣುವ ಸಿನಿಮಾ ಘೋಷಣೆಯೂ ಆಗಿರಬಹುದಾದ ಅನುಮಾನವೂ ಇದೆ.

ದಿವ್ಯಾ ಉರುಡುಗ ಹಾಗೂ ಬೈಕರ್ ಅರವಿಂದ್ ಕೆಪಿ ಕಳೆದ ಕೆಲವು ವರ್ಷಗಳಿಂದಲೂ ಜೋಡಿ ಹಕ್ಕಿಗಳಾಗಿದ್ದಾರೆ. ಅರವಿಂದ್ ಕೆಪಿ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ದಿವ್ಯಾ ಮತ್ತು ಅರವಿಂದ್ ಮೊದಲ ಬಾರಿಗೆ ಭೇಟಿಯಾಗಿದ್ದು ಬಿಗ್ ಬಾಸ್ ಶೋನಲ್ಲಿ. ಬಿಗ್ ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಈ ಜೋಡಿ ಶೋ ಮುಗಿದ ಬಳಿಕವು ಅಷ್ಟೇ ಕ್ಲೋಸ್ ಆಗಿ ಇದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಇದೀಗ ಸಿಹಿ ಸುದ್ದಿ ಎಂದು ಸರ್ಪ್ರೈಸ್ ನೀಡಲು ಮುಂದಾಗಿದೆ.

ಇದನ್ನೂ ಓದಿ:Divya Uruduga: ಜೊತೆಗೆ ಅರವಿಂದ್ ಇದ್ದರೆ ಸಾಕು.. ನಟಿ ದಿವ್ಯಾ ಉರುಡುಗ ಚೇಷ್ಟೆ ಹೇಗಿರುತ್ತೆ ನೋಡಿ

ದಿವ್ಯಾ ಮತ್ತು ಅರವಿಂದ್ ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಈ ನಡುವೆ ರಿಲೀಸ್ ಆಗಿರುವ ವಿಡಿಯೋ ನೋಡಿದ್ರೆ ಇಬ್ಬರೂ ಮದುವೆಗೆ ರೆಡಿಯಾಗಿದ್ದು ಸದ್ಯದಲ್ಲೇ ಮದುವೆ ದಿನಾಂಕ ಬಹಿರಂಗ ಪಡಿಸಲಿದ್ದಾರೆ ಎನ್ನುವ ಅನುಮಾನ ಮೂಡಿಸಿದೆ. ಇದೀಗ ದಿವ್ಯಾ ಹಂಚಿಕೊಂಡಿರುವ ವಿಡಿಯೋನಲ್ಲಿ. ಫೋಟೋಶೂಟ್‌ಗೆ ರೆಡಿಯಾಗುತ್ತಿರುವ ದಿವ್ಯಾ ಅವರನ್ನು ಏನ್ ಸಮಚಾರ ಮೇಡಮ್, ಯಾರೋ ಪ್ರಶ್ನೆ ಮಾಡುತ್ತಾರೆ. ಆದರೆ ದಿವ್ಯಾ ಸಾಮಾಚಾರ ಏನು ಇಲ್ಲ ಎನ್ನುತ್ತಾ ಹೊರಡುತ್ತಾರೆ. ಆದರೆ ‘ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ರೆಡಿಯಾಗುತ್ತಿದೆ’ ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಾ ಖುಷಿ ಪಡುತ್ತಾ ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದು ಫೋಟೋಶೂಟ್‌ಗೆ ತಯಾರಾಗುತ್ತಾರೆ.

‘ಎಷ್ಟೋ ದಿನದ ಕನಸು ನನಸಾಗುವ ಸಮಯ ಬಂದಿದೆ, ನನ್ನಷ್ಟೇ ಕಾತರ ನಿಮಗೂ ಇದೆ ಎಂದು ಗೊತ್ತು’ ಎನ್ನುತ್ತಾ ಕ್ಯಾಮರಾಗೆ ಪೋಸ್ ನೀಡಲು ಸಜ್ಜಾಗುತ್ತಾರೆ ದಿವ್ಯಾ. ಆಗ ಕ್ಯಾಮೆರಾಮನ್ ‘ಸರ್ ಬರೋದಿಲ್ವಾ?’ ಎಂದು ಪ್ರಶ್ನೆ ಮಾಡುತ್ತಾನೆ. ‘ಫೋನ್ ಮಾಡಿ ಕೇಳ್ತೀನಿ’ ಎಂದು ಫೋನ್ ಮಾಡಿ ವಿಚಾರಿಸುತ್ತಾರೆ ದಿವ್ಯಾ. ‘ಇನ್ನು ಬಂದಿಲ್ವಾ, ಶಾಪಿಂಗ್ ಇನ್ನೂ ಮುಗಿದಿಲ್ವಾ, ನೀವು ಬಂದಿಲ್ಲ ಎಂದರೆ ನಾನು ಒಬ್ಬಳೆ ಅನೌನ್ಸ್ ಮಾಡುತ್ತೀನಿ’ ಎನ್ನುತ್ತಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ದಿವ್ಯಾ ಅನೌನ್ಸ್ ಮಾಡುತ್ತಿರುವುದು ಏನು? ದಿವ್ಯಾ ಕಾಲ್ ಮಾಡಿದ್ದು ಅರವಿಂದ್ ಅವರಿಗೆನಾ? ಇಬ್ಬರ ಮದುವೆ ದಿನಾಂಕ ಬಹಿರಂಗ ಪಡಿಸುತ್ತಾರಾ? ಅಥವಾ ಇಬ್ಬರೂ ಸೇರಿ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಎನ್ನುವ ಅನೇಕ ಪ್ರಶ್ನೆ ಮೂಡಿಸಿದೆ.

ಅಂದಹಾಗೆ ದಿವ್ಯಾ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ಬಳಿಕ ‘ಅರ್ದಂಬರ್ಧ ಪ್ರೇಮ ಕಥೆ’ ಸಿನಮಾದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಆ ಸಿನಿಮಾದಲ್ಲಿ ಅರವಿಂದ್ ಕೆಪಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅರವಿಂದ್ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಬಳಿಕ ದಿವ್ಯಾ ಮತ್ತು ಅರವಿಂದ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈ ನಡುವೆ ಗುಡ್ ನ್ಯೂಸ್ ನೀಡಲು ಸಜ್ಜಾಗಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಕುತೂಹಲ ಕೂಡ ಹೆಚ್ಚಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ