‘ಲವ್​ ಮಾಕ್ಟೇಲ್​ 2’ ನಟಿ ರೇಚಲ್​ ಡೇವಿಡ್​ ಹೊಸ ಚಿತ್ರ ಅನೌನ್ಸ್​; ಮಿಲಿಂದ್​ ಹೀರೋ, ಸತ್ಯ ಪ್ರಕಾಶ್​ ನಿರ್ಮಾಣ

Rachel David: ರೇಚಲ್​ ಡೇವಿಡ್​ ಹಾಗೂ ಮಿಲಿಂದ್​ ಜೋಡಿಯ ಹೊಸ ಚಿತ್ರವನ್ನು ‘ಮಯೂರ ಪಿಕ್ಚರ್ಸ್’ ಹಾಗೂ ಡಿ. ಮಂಜುನಾಥ್ ಜೊತೆಗೂಡಿ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಟೈಟಲ್​ ಏನು ಎಂಬುದು ಶೀಘ್ರದಲ್ಲೇ ಬಹಿರಂಗ ಆಗಲಿದೆ.

‘ಲವ್​ ಮಾಕ್ಟೇಲ್​ 2’ ನಟಿ ರೇಚಲ್​ ಡೇವಿಡ್​ ಹೊಸ ಚಿತ್ರ ಅನೌನ್ಸ್​; ಮಿಲಿಂದ್​ ಹೀರೋ, ಸತ್ಯ ಪ್ರಕಾಶ್​ ನಿರ್ಮಾಣ
ರೇಚಲ್ ಡೇವಿಡ್, ಮಿಲಿಂದ್
Madan Kumar

|

Jul 21, 2022 | 7:15 AM

ನಟಿ ರೇಚಲ್​ ಡೇವಿಡ್​ (Rachel David) ಅವರು ಮೂಲತಃ ಮಲಯಾಳಿ ಹುಡುಗಿ. ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ವರ್ಷ ಸೂಪರ್​ ಹಿಟ್​ ಆದ ‘ಲವ್​ ಮಾಕ್ಟೇಲ್​ 2’ (Love Mocktail 2) ಚಿತ್ರದಲ್ಲಿ ಸಿಹಿ ಎಂಬ ಪಾತ್ರ ಮಾಡಿದ ಅವರಿಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಸಿಕ್ಕಿತು. ಈಗ ರೇಚಲ್​ ಡೇವಿಡ್​ ಅವರಿಗೆ ಕನ್ನಡ ಚಿತ್ರದಲ್ಲಿ ಹೊಸ ಹೊಸ ಆಫರ್​ಗಳು ಸಿಗುತ್ತಿವೆ. ಅವರು ನಟಿಸಲಿರುವ ನೂತನ ಸಿನಿಮಾ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಸಿನಿಮಾವನ್ನು ‘ರಾಮಾ ರಾಮಾ ರೇ’ ಖ್ಯಾತಿಯ ಡಿ. ಸತ್ಯ ಪ್ರಕಾಶ್​ (D Satya Prakash) ಅವರು ನಿರ್ಮಾಣ ಮಾಡುತ್ತಿದ್ದಾರೆ. ದೀಪಕ್​ ಮಧುವನಹಳ್ಳಿ ಅವರು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಹೊಸ ನಟ ಮಿಲಿಂದ್​ ಈ ಚಿತ್ರಕ್ಕೆ ಹೀರೋ.

‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ’, ‘ಮ್ಯಾನ್​ ಆಫ್​ ದಿ ಮ್ಯಾಚ್​’ ಸಿನಿಮಾಗಳಿಂದ ಸತ್ಯ ಪ್ರಕಾಶ್ ಗುರುತಿಸಿಕೊಂಡಿದ್ದಾರೆ. ನಿರ್ದೇಶನದಲ್ಲಿ ಯಶಸ್ಸು ಕಂಡ ಬಳಿಕ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲೂ ಅವರು ಬ್ಯುಸಿ ಆಗಿದ್ದಾರೆ. ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡುತ್ತಿದ್ದಾರೆ. ಸತ್ಯ ಪ್ರಕಾಶ್​ ನಿರ್ಮಾಣ ಮಾಡಲಿರುವ ಹೊಸ ಚಿತ್ರದಲ್ಲಿ ಮಿಲಿಂದ್ ಮತ್ತು ರೇಚಲ್​ ಡೇವಿಡ್​ ಅವರು ಜೋಡಿ ಆಗುತ್ತಿದ್ದಾರೆ.

2018ರಲ್ಲಿ ತೆರೆಕಂಡ ಅನಂತ್ ನಾಗ್ ಅಭಿನಯದ ‘ವೀಕೆಂಡ್’ ಚಿತ್ರದಲ್ಲಿ ಅಭಿನಯಿಸಿದ್ದ ಮಿಲಿಂದ್ ಅವರಿಗೆ ಇದು ಎರಡನೇ ಸಿನಿಮಾ. ರೇಚಲ್​ ಡೇವಿಡ್​ ಹಾಗೂ ಮಿಲಿಂದ್​ ನಟಿಸಲಿರುವ ಈ ಹೊಸ ಚಿತ್ರವನ್ನು ‘ಮಯೂರ ಪಿಕ್ಚರ್ಸ್’ ಮೂಲಕ ಸತ್ಯ ಪ್ರಕಾಶ್​ ಹಾಗೂ ಡಿ. ಮಂಜುನಾಥ್ ಅವರು ಜೊತೆಯಾಗಿ ನಿರ್ಮಾಣ ಮಾಡಲಿದ್ದಾರೆ. ಸಿನಿಮಾದ ಟೈಟಲ್​ ಏನು ಎಂಬುದು ಶೀಘ್ರದಲ್ಲೇ ಬಹಿರಂಗ ಆಗಲಿದೆ. ಪಾತ್ರವರ್ಗದಲ್ಲಿ ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ

‘ಭಾಗ್ಯ ರಾಜ್’, ‘ರಾಜು ಜೇಮ್ಸ್ ಬಾಂಡ್’, ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾ ನಿರ್ದೇಶನ ಮಾಡಿದ್ದ ದೀಪಕ್ ಮಧುವನಹಳ್ಳಿ ಅವರಿಗೆ ಇದು ನಾಲ್ಕನೇ ಸಿನಿಮಾ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಲವಿತ್ ಛಾಯಾಗ್ರಹಣ, ಅಜಯ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಿರ್ಮಾಣ ಮಾಡುವುದರ ಜೊತೆಗೆ ಸತ್ಯ ಪ್ರಕಾಶ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada