‘ಹಾಯ್ ಅಪ್ಪ..’, ‘ಹಾಯ್ ಮಗಳೇ’; ಶ್ರೀನಾಥ್-ಅದಿತಿ ಪ್ರಭುದೇವ ಕ್ಯೂಟ್ ವಿಡಿಯೋ ವೈರಲ್
ಹಿರಿಯ ನಟ ಶ್ರೀನಾಥ್ ಮತ್ತು ನಟಿ ಅದಿತಿ ಪ್ರಭುದೇವ ಅವರ ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಹಲವು ಸಿನಿಮಾ ಆಫರ್ಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಚಿತ್ರರಂಗದ ಅನೇಕ ಕಲಾವಿದರ ಜೊತೆ ಅವರಿಗೆ ಉತ್ತಮ ಬಾಂಧವ್ಯ ಇದೆ. ಹಿರಿಯ ನಟ ಶ್ರೀನಾಥ್ (Srinath) ಜೊತೆ ಅವರು ‘ಶುಭ ಮಂಗಳ’ (Shubhamangala Movie) ಚಿತ್ರದ ‘ಹೂವೊಂದು ಬಳಿ ಬಂದು..’ ಗೀತೆಯನ್ನು ಹಾಡಿರುವ ವಿಡಿಯೋ ವೈರಲ್ ಆಗಿದೆ. ಅದಕ್ಕೂ ಮುನ್ನ ‘ಹಾಯ್ ಅಪ್ಪ..’, ‘ಹಾಯ್ ಮಗಳೇ..’ ಎಂದು ಅವರಿಬ್ಬರು ಮಾತನಾಡಿರುವುದು ಸಖತ್ ಕ್ಯೂಟ್ ಆಗಿದೆ.
Published on: Jul 21, 2022 05:37 PM
Latest Videos