‘ಗರಡಿ’ ತಂಡದಿಂದ ಮೂಡಿ ಬಂದ ಹೊಸ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ
ಹರಿಕೃಷ್ಣ ಅವರ ಧ್ವನಿಯಲ್ಲಿ ‘ಲೋಕಾನೆ ಗರಡಿ.. ಬಾಳೇ ಅಖಾಡ..’ ಹಾಡು ಮೂಡಿ ಬಂದಿದೆ. ಅವರ ಜೊತೆಗೆ ಹಲವು ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಇಡೀ ತಂಡ ಹಾಡಿನ ರಿಲೀಸ್ ಕಾರ್ಯದಲ್ಲಿ ಭಾಗಿ ಆಗಿದೆ.
ಯೋಗರಾಜ್ ಭಟ್ (Yogaraj Bhat) ಸಾಹಿತ್ಯದಲ್ಲಿ ಮೂಡಿಬರುವ ಹಾಡುಗಳು ಸಾಕಷ್ಟು ಭಿನ್ನವಾಗಿರುತ್ತವೆ. ‘ಗರಡಿ’ ಸಿನಿಮಾದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ ರಿಲೀಸ್ ಆಗಿದ್ದು, ಇದಕ್ಕೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ‘ಲೋಕಾನೆ ಗರಡಿ.. ಬಾಳೇ ಅಖಾಡ..’ ಎಂಬ ಹಾಡು ಮೆಚ್ಚುಗೆ ಪಡೆಯುತ್ತಿದೆ. ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹರಿಕೃಷ್ಣ ಅವರ ಧ್ವನಿಯಲ್ಲಿ ‘ಲೋಕಾನೆ ಗರಡಿ.. ಬಾಳೇ ಅಖಾಡ..’ ಹಾಡು ಮೂಡಿ ಬಂದಿದೆ. ಅವರ ಜೊತೆಗೆ ಹಲವು ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಇಡೀ ತಂಡ ಹಾಡಿನ ರಿಲೀಸ್ ಕಾರ್ಯದಲ್ಲಿ ಭಾಗಿ ಆಗಿದೆ.
‘ಗರಡಿ’ ಬಗ್ಗೆ ಯೋಗರಾಜ್ ಭಟ್ ಮಾಹಿತಿ ಹಂಚಿಕೊಂಡರು. ‘ಮೊದಲೆಲ್ಲ ಊರಿನ ರಕ್ಷಣೆಗೆ ಗರಡಿ ಬಹಳ ಮುಖ್ಯವಾಗಿತ್ತು. ಗರಡಿ ಮನೆಯ ಕುಸ್ತಿಪಟುಗಳನ್ನು ಊರಿನವರು ಮನೆಮಂದಿಯಂತೆ ನೋಡಿಕೊಳ್ಳುತ್ತಿದ್ದರು. ಅಂತಹ ಗರಡಿ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ’ ಎಂದು ಸಿನಿಮಾ ಬಗ್ಗೆ ಮಾಹಿತಿ ನೀಡಿದರು ಯೋಗರಾಜ್ ಭಟ್. ಬಿ.ಸಿ. ಪಾಟೀಲ್ ಗರಡಿ ಮನೆಯ ಯಜಮಾನನಾಗಿ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಕಾಣಿಸಿಕೊಂಡಿದ್ದಾರೆ.
ಬಿಸಿ ಪಾಟೀಲ್ ಅವರ ಪತ್ನಿ ವನಜಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನವೆಂಬರ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ರಿಲೀಸ್ಗೆ ನವೆಂಬರ್ ತಿಂಗಳನ್ನೇ ಆಯ್ಕೆಮಾಡಿಕೊಳ್ಳಲು ಕಾರಣವೂ ಇದೆ. ನವೆಂಬರ್ 14 ಬಿಸಿ ಪಾಟೀಲ್ ಅವರ ಜನ್ಮದಿನ. ಎರಡು ವರ್ಷಗಳ ಹಿಂದೆ ಅವರ ಜನ್ಮದಿನದಂದೇ ಸಿನಿಮಾ ಲಾಂಚ್ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೀರ್ಷಿಕೆ ಅನಾವರಣ ಮಾಡಿದ್ದರು.
ಇದನ್ನೂ ಓದಿ: ‘ಗರಡಿ’ ಚಿತ್ರದ ಸುದ್ದಿಗೋಷ್ಠಿಗೆ ವಿಶೇಷ ರೀತಿಯಲ್ಲಿ ಎಂಟ್ರಿಕೊಟ್ಟ ಯೋಗರಾಜ್ ಭಟ್
‘ಗರಡಿ’ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಸಿ ಪಾಟೀಲ್ ಸಿನಿಮಾ ವೀಕ್ಷಿಸಿದ್ದು, ಅವರಿಗೆ ಇಷ್ಟವಾಗಿದೆ. ಈ ಚಿತ್ರಕ್ಕೆ ಸೂರ್ಯ ಹೀರೋ. ಸಿನಿಮಾದಲ್ಲೂ ಸೂರ್ಯ ಎಂದೇ ಹೆಸರನ್ನು ಇಡಲಾಗಿದೆ. ಸೋನಾಲ್ ಮಾಂತೆರೊ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸುಜಯ್, ರಾಘು, ಧರ್ಮಣ್ಣ ಮೊದಲಾದವರು ನಟಿಸಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ಧನಂಜಯ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಸೃಷ್ಟಿ ಪಾಟೀಲ್ ಕಾರ್ಯಕಾರಿ ನಿರ್ಮಾಪಕಿ ಆಗಿ ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Wed, 27 September 23