ಕಲಬುರಗಿ ಗೃಹಜೋತಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಭಾಗಿಯಾಗುವ ಮಂದಿಗೆ ಬಗೆ ಬಗೆಯ ಭಕ್ಷ್ಯ

| Updated By: ಆಯೇಷಾ ಬಾನು

Updated on: Aug 05, 2023 | 11:03 AM

ಕಲಬುರಗಿ ನಗರದ ಎನ್ ವಿ ಮೈದಾನದಲ್ಲಿ 200 ಯುನಿಟ್ ವಿದ್ಯುತನ್ನು ಉಚಿತವಾಗಿ ನೀಡುವ ಗೃಹ ಜೋತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಕಲಬುರಗಿ, ಆ.05: ಕಲಬುರಗಿಯಲ್ಲಿ 200 ಯುನಿಟ್ ವಿದ್ಯುತನ್ನು ಉಚಿತವಾಗಿ ನೀಡುವ ಗೃಹ ಜೋತಿ ಯೋಜನೆಗೆ(Gruha Jyothi Scheme) ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವೇದಿಕೆ ಮೇಲೆ 10 ಜನರಿಗೆ ಸಾಂಕೇತಿಕವಾಗಿ ಜಿರೋ ಬಿಲ್ ವಿತರಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಚಾಲನೆ ನೀಡಲಿದ್ದಾರೆ.

ಕಲಬುರಗಿ ನಗರದ ಎನ್ ವಿ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಡಿಸಿಎಂ ಡಿ.ಕೆ ಶಿವಕುಮಾರ್, ಇಂಧನ ಸಚಿವ‌ ಕೆ.ಜೆ‌ ಜಾರ್ಜ್ ಸೇರಿ ಹಲವು ಗಣ್ಯರು ಭಾಗಿ. 15 ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾಗೋ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರಲು ಇನ್ನೂರು ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಫಲಾನುಭವಿಗಳು ಆಗಮಿಸಲಿದ್ದಾರೆ. ಇನ್ನು ಬಂದವರಿಗೆ ಮುಂಜಾನೆ ಉಪಹಾರ ಮತ್ತು ಮಧ್ಯಾಹ್ನದ ಊಟಕ್ಕೆ ಪಲಾವ್ ಮತ್ತು ಲಡ್ಡು ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನು ಗೃಹ ಜೋತಿ ಯೋಜನೆಯಡಿ ರಾಜ್ಯದಲ್ಲಿ ಜುಲೈ 25 ರವರಗೆ ಒಂದು ಕೋಟಿ 41 ಲಕ್ಷ 23 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದು, ಅವರು ಯೋಜನೆಯ ಲಾಭ ಪಡೆಯಲಿದ್ದಾರೆ.