‘ವರ್ತೂರು ಸಂತೋಷ್ ಆಟ ನಿಜಕ್ಕೂ ಗ್ರೇಟ್’; ಹೊಗಳಿದ ತುಕಾಲಿ ಸಂತೋಷ್

Updated on: Jan 31, 2024 | 9:41 AM

ಹುಲಿ ಉಗುರು ಹೊಂದಿರುವ ಕೇಸ್​ನಲ್ಲಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದರು. ಒಂದು ವಾರ ಹೊರಗೆ ಇದ್ದರು. ಅವರು ಅರೆಸ್ಟ್ ಆದ ವಿಚಾರ ದೊಡ್ಮನೆಯವರಿಗೆ ಗೊತ್ತಿರಲಿಲ್ಲ. ಈ ಬಗ್ಗೆ ತುಕಾಲಿ ಸಂತೋಷ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವರ್ತೂರು ಸಂತೋಷ್ (Varthur Santosh) ಅವರು ಹುಲಿ ಉಗುರು ಹೊಂದಿರುವ ಕೇಸ್​ನಲ್ಲಿ ಅರೆಸ್ಟ್ ಆಗಿದ್ದರು. ಒಂದು ವಾರ ಹೊರಗೆ ಇದ್ದರು. ಅವರು ಅರೆಸ್ಟ್ ಆದ ವಿಚಾರ ದೊಡ್ಮನೆಯವರಿಗೆ ಗೊತ್ತಿರಲಿಲ್ಲ. ಈ ಬಗ್ಗೆ ತುಕಾಲಿ ಸಂತೋಷ್ ಮಾತನಾಡಿದ್ದಾರೆ. ‘ಮನಸ್ಸಲ್ಲಿ ಭಾರ ಇದ್ದಾಗ ಆಡೋದು ಕಷ್ಟ. ಆದಾಗ್ಯೂ ವರ್ತೂರು ಸಂತೋಷ್ ಅವರು ತಮ್ಮ ಆಟ ತೋರಿಸಿದರು. ಅವರು ಅರೆಸ್ಟ್ ಆದ ವಿಚಾರ ನಮಗೆ ಗೊತ್ತಿರಲಿಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇಬ್ಬರೂ ಹೆಚ್ಚು ಸಮಯ ಒಟ್ಟಾಗಿ ಕಳೆದಿದ್ದಾರೆ. ಇಬ್ಬರೂ ಕೊನೆವರೆಗೆ ಉಳಿದುಕೊಂಡಿದ್ದರು. ಇಬ್ಬರೂ ಟಾಪ್ 6ರಲ್ಲಿ ಇದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More