ವರ್ತೂರು ಸಂತೋಷ್​ ಪರವಾಗಿ ತುಕಾಲಿ ಸಂತೋಷ್​ ನಿಂತುಕೊಂಡಿದ್ದು ಯಾಕೆ?

ಒಂದು ಹಂತದಲ್ಲಿ ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಆಟವನ್ನು ಅರ್ಧಕ್ಕೆ ತೊರೆಯುವ ನಿರ್ಧಾರ ಮಾಡಿದ್ದರು. ಹೊರಗೆ ಹೋಗಲೇಬೇಕು ಎಂದು ಕಣ್ಣೀರು ಹಾಕಿದ್ದರು. ಅಂಥ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಿದವರು ತುಕಾಲಿ ಸಂತೋಷ್​. ತಾವು ವರ್ತೂರು ಸಂತೋಷ್​ ಪರವಾಗಿ ನಿಂತಿದ್ದು ಯಾಕೆ ಎಂಬುದನ್ನು ಅವರೀಗ ವಿವರಿಸಿದ್ದಾರೆ.

ವರ್ತೂರು ಸಂತೋಷ್​ ಪರವಾಗಿ ತುಕಾಲಿ ಸಂತೋಷ್​ ನಿಂತುಕೊಂಡಿದ್ದು ಯಾಕೆ?
ತುಕಾಲಿ ಸಂತೋಷ್, ವರ್ತೂರು ಸಂತೋಷ್​
Follow us
|

Updated on: Jan 29, 2024 | 9:36 PM

ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವುದಕ್ಕೂ ಮೊದಲು ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್ (Tukali Santhosh)​ ನಡುವೆ ಸ್ನೇಹ ಇರಲಿಲ್ಲ. ಆದರೆ ದೊಡ್ಮನೆಯೊಳಗೆ ಅವರು ಆತ್ಮೀಯ ಸ್ನೇಹಿತರಾದರು. ಇಬ್ಬರೂ ಜೊತೆಯಾಗಿ ಫಿನಾಲೆ ತನಕ ಪೈಪೋಟಿ ನೀಡಿದರು ಎಂಬುದು ಗಮನಾರ್ಹ ಸಂಗತಿ. ಜನವರಿ 28ರಂದು ಬಿಗ್​ ಬಾಸ್​ (BBK 10) ಫಿನಾಲೆ ನಡೆಯಿತು. ಅಂತಿಮವಾಗಿ ಕಾರ್ತಿಕ್​ ಮಹೇಶ್​ ಟ್ರೋಫಿ ಗೆದ್ದರು. ತುಕಾಲಿ ಸಂತೋಷ್​ 5ನೇ ರನ್ನರ್​ಅಪ್​ ಹಾಗೂ ವರ್ತೂರು ಸಂತೋಷ್​ (Varthur Santhosh) 4ನೇ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಶೋ ಮುಗಿದ ಬಳಿಕ ‘ಟಿವಿ 9 ಕನ್ನಡ’ದ ಜೊತೆ ಮಾತನಾಡಿದ ತುಕಾಲಿ ಸಂತೋಷ್​ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಒಂದು ಹಂತದಲ್ಲಿ ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಆಟವನ್ನು ಅರ್ಧಕ್ಕೆ ತೊರೆಯುವ ನಿರ್ಧಾರ ಮಾಡಿದ್ದರು. ಹೊರಗೆ ಹೋಗಲೇಬೇಕು ಎಂದು ಕಣ್ಣೀರು ಹಾಕಿದ್ದರು. ಅಂಥ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಿದವರು ತುಕಾಲಿ ಸಂತೋಷ್​. ಅಷ್ಟಕ್ಕೂ ತುಕಾಲಿ ಸಂತೋಷ್​ ಅವರು ವರ್ತೂರು ಪರವಾಗಿ ನಿಂತಿದ್ದು ಯಾಕೆ ಎಂಬುದನ್ನು ಅವರೀಗ ವಿವರಿಸಿದ್ದಾರೆ.

ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

‘ವರ್ತೂರು ಸಂತೋಷ್​ ಅವರದ್ದು ಮುಗ್ಧ ಮನಸ್ಸು. ಎಲ್ಲರಿಗೂ ಬೆಂಬಲ ನೀಡುವಂಥ ವ್ಯಕ್ತಿತ್ವ. ಯಾರ ಜೊತೆಗೂ ಬೇಸರ ಮಾಡಿಕೊಳ್ಳಲ್ಲ. ಅಂಥ ವ್ಯಕ್ತಿ ನನ್ನ ಫ್ರೆಂಡ್​. ನನ್ನಿಂದ ಅವರು ಏನೂ ನಿರೀಕ್ಷೆ ಮಾಡಿಲ್ಲ. ಅವರು ಅರ್ಧಕ್ಕೆ ಮನೆ ಬಿಟ್ಟು ಹೋಗುತ್ತೇನೆ ಎಂದಾಗ ಬೇಸರ ಆಯ್ತು. ಅಂಥ ಸ್ನೇಹವನ್ನು ಬಿಟ್ಟುಕೊಡಲು ನನಗೆ ಆಗಲ್ಲ. ರೈತರ ಪರವಾಗಿ ಬಂದಿದ್ದಾರೆ. ಚೆನ್ನಾಗಿ ಆಡುತ್ತಿದ್ದಾರೆ. ಈ ಶೋ ಮೂಲಕ ರೈತರಿಗೆ ಒಂದಷ್ಟು ವಿಷಯ ತಿಳಿಸಲಿ. ಕೊನೆವರೆಗೂ ಉಳಿದುಕೊಳ್ಳಲಿ ಎಂಬುದು ನನ್ನ ಆಸೆಯಾಗಿತ್ತು’ ಎಂದು ತುಕಾಲಿ ಸಂತೋಷ್​ ಹೇಳಿದ್ದಾರೆ.

‘ನಮ್ಮ ಅಣ್ಣ ಟಾಪ್​ 3 ಅಥವಾ ಟಾಪ್​ 2 ಸ್ಥಾನದಲ್ಲಿ ಇರುತ್ತಾರೆ ಎಂದುಕೊಂಡೆ. ಅದು ಆಗಲಿಲ್ಲ. ಏನಾಯ್ತೋ ಏನೋ. ಐದನೆಯವನಾಗಿ ನೀನು ಹೋಗು, ಆರನೆಯವನಾಗಿ ಅವನು ಹೋಗಲಿ ಅಂತ ದೇವರ ತಥಾಸ್ತು ಎಂದಿರಬಹುದು. ಅವರು ಹೊರಬಂದಾಗ ಕಣ್ಣೀರು ತಡೆಯೋಕೆ ಆಗಲಿಲ್ಲ. ಮನಸ್ಸಿನಲ್ಲಿ ನೋವು ಇಟ್ಟುಕೊಂಡು ಆಡುವುದು ಸುಲಭವಲ್ಲ. ಹಾಗಾಗಿ ಆರಂಭದಲ್ಲಿ ವರ್ತೂರು ಸಂತೋಷ್​ ಚೆನ್ನಾಗಿ ಆಟವಾಡಲು ಸಾಧ್ಯವಾಗಿರಲಿಲ್ಲ’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ