ಮತ್ತೆ ಸಂಗೀತಾ ಶೃಂಗೇರಿ-ತುಕಾಲಿ ಸಂತೋಷ್ ಭೇಟಿ ಆಗೋದೇ ಇಲ್ವಾ?
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಜೊತೆ ಆಪ್ತವಾಗಿದ್ದರು. ಆದರೆ ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್ ಅವರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು. ತುಕಾಲಿ ಸಂತೋಷ್ ಅವರನ್ನು ಮತ್ತೆ ಭೇಟಿ ಮಾಡುವುದಿಲ್ಲ ಎಂದು ಸಂಗೀತಾ ಹೇಳಿದ್ದರು.
ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸಹಜ. ತುಕಾಲಿ ಸಂತೋಷ್ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ನಡುವೆಯೂ ಹಲವು ಬಾರಿ ಜಗಳ ಆಗಿದೆ. ಅಲ್ಲದೇ, ತುಕಾಲಿ ಸಂತೋಷ್ ಅವರನ್ನು ಬಿಗ್ ಬಾಸ್ (Bigg Boss Kannada) ಮನೆಯ ಹೊರಗೆ ಭೇಟಿ ಆಗುವುದೇ ಇಲ್ಲ ಎಂದು ಸಂಗೀತಾ ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವಿನ ಮನಸ್ತಾಪ ಅಂತ್ಯ ಆಯಿತು. ಈಗ ಬಿಗ್ ಬಾಸ್ ಮುಕ್ತಾಯ ಆಗಿದೆ. ಎಲ್ಲ ಕ್ಷಣಗಳನ್ನು ಸ್ಪರ್ಧಿಗಳ ಮೆಲುಕು ಹಾಕುತ್ತಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್ (Tukali Santhosh) ಅವರು ಮತ್ತೊಮ್ಮೆ ಭೇಟಿ ಆಗುತ್ತಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿದೆ. ಅದಕ್ಕೆ ತುಕಾಲಿ ಸಂತೋಷ್ ಉತ್ತರ ನೀಡಿದ್ದಾರೆ.
‘ಖಂಡಿತಾ ನಾವು ಮೀಟ್ ಮಾಡುತ್ತೇವೆ. ಅದು ಆಟ ಮಾತ್ರ. ಆದರೆ ಇದು ಜೀವನ ಪಾಠ. ಆಟದಲ್ಲಿ ಇಲ್ಲದೇ ಇರುವುದು ಜೀವನ ಪಾಠದಲ್ಲಿ ಇರುತ್ತದೆ. ಸಂಗೀತಾ ಅವರು ತುಂಬ ಸ್ಟ್ರಾಂಗ್ ಲೇಡಿ. ಅವರು ಗೆದ್ದಿದ್ದರೂ ನನಗೆ ಖುಷಿ ಆಗುತ್ತಿತ್ತು. ಟ್ರೋಫಿಗೆ ಅವರು ಅರ್ಹರು. ಅವರಿಗೆ ಒಳ್ಳೆಯದಾಗಲಿ. ಬದುಕಿನಲ್ಲಿ ತುಂಬ ಕಷ್ಟಪಟ್ಟಿದ್ದಾರೆ. ಅತ್ತಿದ್ದಾರೆ, ನಕ್ಕಿದ್ದಾರೆ. ನಿನ್ನ ಕಾಮಿಡಿಗೆ ನಗು ಬರಲ್ಲ ಅನ್ನುತ್ತಿದ್ದರು. ಆದರೆ ನಂತರ ನಕ್ಕಿದ್ದಾರೆ. ಅವರು ಖುಷಿಯಾಗಿರಲಿ’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.
ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್ ಆಗಿತ್ತು’: ಬಿಗ್ ಬಾಸ್ ಮೇಲೆ ದೊಡ್ಡ ಆರೋಪ
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಜೊತೆ ಆಪ್ತವಾಗಿದ್ದರು. ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ವಿನಯ್ ಗೌಡ ಅವರ ಫಿನಾಲೆಗೆ ಬಂದಿದ್ದರು. ಅಂತಿಮವಾಗಿ ಅತಿ ಹೆಚ್ಚು ವೋಟ್ ಪಡೆದ ಕಾರ್ತಿಕ್ ಮಹೇಶ್ ಅವರು ವಿನ್ನರ್ ಪಟ್ಟ ಪಡೆದರು. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಜನವರಿ 28ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮುಕ್ತಾಯ ಆಯಿತು. ಡ್ರೋನ್ ಪ್ರತಾಪ್ ಮೊದಲ ರನ್ನರ್ ಅಪ್ ಆದರು. ಎರಡನೇ ರನ್ನರ್ಅಪ್ ಸ್ಥಾನಕ್ಕೆ ಸಂಗೀತಾ ಶೃಂಗೇರಿ ತೃಪ್ತಿಪಟ್ಟುಕೊಂಡರು. ಮೂರನೇ ರನ್ನರ್ಅಪ್ ಸ್ಥಾನ ವಿನಯ್ ಗೌಡ ಅವರಿಗೆ ಸಿಕ್ಕಿತು. ವರ್ತೂರು ಸಂತೋಷ್ ನಾಲ್ಕನೇ ರನ್ನರ್ಅಪ್, ತುಕಾಲಿ ಸಂತೋಷ್ 5ನೇ ರನ್ನರ್ಅಪ್ ಆಗಿ ಹೊರಹೊಮ್ಮಿದರು. ಈ ಕಾರ್ಯಕ್ರಮದಿಂದ ಎಲ್ಲರಿಗೂ ಜನಪ್ರಿಯತೆ ಸಿಕ್ಕಿದೆ. ಎಲ್ಲರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:50 pm, Mon, 29 January 24