Vaastu Tips: ದಕ್ಷಿಣ ದಿಕ್ಕಿಗೆ ಬಾಗಿಲು ಇದ್ದರೆ ಏನೆಲ್ಲಾ ಪ್ರಯೋಜನ, ಇಲ್ಲಿ ತಿಳಿದುಕೊಳ್ಳಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರವು ಜನರಿಗೆ ಪ್ರವೇಶ ನೀಡುವುದಷ್ಟೇ ಅಲ್ಲದೆ, ಶಕ್ತಿ ಸಂಚಯನದ ಸ್ಥಳ. ಹೀಗಾಗಿ ಮನೆಯ ಮುಖ್ಯ ದ್ವಾರವನ್ನು ಇಡುವಾಗ ವಾಸ್ತು ನೋಡಲೇ ಬೇಕು ಎನ್ನಲಾಗುತ್ತೆ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ವಿವರಿಸಿದ್ದಾರೆ.
ಮನೆ ಕಟ್ಟಿ ನೋಡು ಇಲ್ಲ, ಮದುವೆ ಮಾಡಿ ನೋಡು ಎಂಬ ಮಾತಿನಂತೆ ಮನೆ ಕಟ್ಟೋದು ತುಂಬ ಸುಲಭದ ಕೆಲಸವಲ್ಲ. ಅದರಲ್ಲೂ ಮನೆ ಕಟ್ಟುವಾಗ ಒಂದು ಚಿಕ್ಕ ಸಮಸ್ಯೆ ಎದುರಾದರೂ ಕೆಲಸ ನಿಂತು ಹೋಗುತ್ತೆ. ಜೊತೆಗೆ ವಾಸ್ತು ನೋಡಿಯೇ ಮನೆ ಕಟ್ಟಬೇಕು ಇಲ್ಲದಿದ್ದರೆ ಆ ಮನೆಯಲ್ಲಿ ಜೀವನ ನಡೆಸುವವರಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂದು ನಮ್ಮ ಹಿರಿಯರು ಹೇಳುವುದುಂಟು.
ಸ್ವಂತ ಮನೆ ಕಟ್ಟುವಾಗ ಮಾತ್ರವಲ್ಲದೆ, ಜನರು ಬಾಡಿಗೆ ಮನೆ ಹುಡುಕುವಾಗಲೂ ವಾಸ್ತು ನೋಡುತ್ತಾರೆ. ಮನೆಯ ವಾಸ್ತು ವಿಚಾರಕ್ಕೆ ಬಂದರೆ ಮುಖ್ಯ ದ್ವಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬನ್ನಿ ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ದಕ್ಷಿಣ ದಿಕ್ಕಿಗೆ ಬಾಗಿಲು ಇದ್ದರೆ ಅದರ ಮಹತ್ವವೇನು? ದಕ್ಷಿಣ ದಿಕ್ಕಿಗೆ ಬಾಗಿಲು ಇಟ್ಟು ಮನೆ ಕಟ್ಟಬಹುದಾ ಎಂಬ ಪ್ರಶ್ನೆಗಳಿಗೆ ವಿವರಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ