Vastu Tips: ದೇವರ ಮನೆಯಲ್ಲಿ ಇರಬೇಕಾದ ವಸ್ತುಗಳೇನು?
ದೇವರ ಮನೆಯಲ್ಲಿ ಏನೇನು ಇಡಬೇಕು? ಏನೇನು ಇಡುವುದರಿಂದ ಧನಾತ್ಮಕ ಲಾಭ ಸಿಗುತ್ತದೆ. ದೇವರ ಕೃಪೆಗೆ ಪಾತ್ರರಾಗಬೇಕಾದ್ರೆ ಯಾವೆಲ್ಲಾ ರೀತಿ ಪೂಜೆ ಮಾಡಬೇಕು ಎಂಬುವುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.
ದೇವರ ಮನೆ ಎಂಬುವುದು ಇಡೀ ಮನೆಯಲ್ಲೇ ಪವಿತ್ರ ಜಾಗವಾಗಿದೆ. ಇದು ದೇವರ ವಾಸಸ್ಥಾನ. ಹೀಗಾಗಿ ಅಲ್ಲಿ ಏನು ಇರಬೇಕು, ಏನು ಇರಬಾರದು ಎಂಬುವುದು ಅತಿ ಮುಖ್ಯ. ಇದನ್ನು ತಿಳಿದುಕೊಂಡು ಇಡಬೇಕಾದ ವಸ್ತುಗಳನ್ನ ಮಾತ್ರ ಇಟ್ಟರೆ ದೇವರ ಸಂತೃಪ್ತನಾಗಿ ಧನಾತ್ಮಕ ಲಾಭಗಳನ್ನು ನೀಡುತ್ತಾನೆ. ದೇವರ ಮನೆಯಲ್ಲಿ ಕುಲ ದೇವರ ವಿಗ್ರಹ ಅಥವಾ ಫೋಟೋ ಇಡುವುದು ಕಡ್ಡಾಯ.
ಕಳಶ ಸ್ಥಾಪನೆ ಮಾಡಬೇಕು. ಒಂದೇ ದೇವರ ಎರಡೆರಡು ವಿಗ್ರಹಗಳು, ಫೋಟೋಗಳನ್ನು ಇಡಬಾರದು. ದೇವರ ಮನೆಯಲ್ಲಿ ಸ್ವಚ್ಛವಾಗಿಟ್ಟುಕೊಳ್ಳಿ. ಚಿಕ್ಕದೊಂದು ದೇವರ ಮನೆಯಲ್ಲಿ ಹತ್ತಾರು ದೇವರ ಫೋಟೋ ಬೇಡ. ಜೋಡಿ ದೀಪ ಇಟ್ಟರೆ ಒಳ್ಳೆಯದು. ಆರತಿ ತಟ್ಟೆ, ಗಂಗಾಜಲ ಇರಬೇಕು. ಮತ್ತಷ್ಟು ವಿಚಾರಗಳನ್ನು ಗುರೂಜಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ