ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ಹಿಂದಿ ಬಾಷೆ ಪರ ಇದ್ದಾರೆ: ವಾಟಾಳ್ ನಾಗರಾಜ್

| Updated By: Digi Tech Desk

Updated on: Jun 06, 2022 | 1:02 PM

ಕರ್ನಾಟಕದ ಬಿಜೆಪಿಗೂ ಹಿಂದಿ ಬೇಕು. ನಮ್ಮ ರಾಜ್ಯದ ಶಾಸಕರು ಕನ್ನಡ ಭಾಷೆಯ ಅಭಿಮಾನ, ಗಾಂಭೀರ್ಯತೆ ಮತ್ತು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು, ರಾಜ್ಯಪಾಲರಿಗೆ ಹಿಂದಿಯಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು, ಅವರು ಕರ್ನಾಟಕದಲ್ಲಿ ಹಿಂದಿ ಮಾತಾಡಕೂಡದು ಎಂದು ನಾಗರಾಜ್ ಹೇಳಿದರು.

Bengaluru: ಹಿರಿಯ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ಶುಕ್ರವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕನ್ನಡಿಗರ ಮೇಲೆ ಹಿಂದಿ ಭಾಷೆಯನ್ನು (Hindi language) ಹೇರಲು ಪ್ರಯತ್ನಿಸುತ್ತಿರುವ ಮತ್ತು ಕನ್ನಡದ ಪರ ಧ್ವನಿಯೆತ್ತದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು. ಹಿಂದಿ ನಟ ಅಜಯ ದೇವಗನ್ (Ajay Devgn) ಹಿಂದಿ ರಾಷ್ಟ್ರಭಾಷೆ ಅಂತ ಬಿಂಬಿಸಲು ಪ್ರಯತ್ನಿಸಿದಾಗ ಅದನ್ನು ಸ್ಯಾಂಡಲ್ ವುಡ್ ಜೊತೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ವಿರೋಧಿಸಿವೆಯೇ ಹೊರತು ಕರ್ನಾಟಕದ ಬಿಜೆಪಿ ನಾಯಕರು ಚಕಾರವೆತ್ತಿಲ್ಲ ಅಂತ ಮಾಧ್ಯಮದವರು ಗಮನಕ್ಕೆ ತಂದಾಗ ನಾಗರಾಜ್ ಅವರು, ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಹಿಂದಿ ರಾಷ್ಟ್ರಬಾಷೆ ಅಂತ ಹೇಳುತ್ತಾರೆ. ಅದರೆ ಹಿಂದಿ ರಾಷ್ಟ್ರಭಾಷೆ ಅಲ್ಲ ಮತ್ತು ಅಗೋದಿಕ್ಕೂ ಸಾಧ್ಯವಿಲ್ಲ ಎಂದರು.

ಕರ್ನಾಟಕದ ಬಿಜೆಪಿಗೂ ಹಿಂದಿ ಬೇಕು. ನಮ್ಮ ರಾಜ್ಯದ ಶಾಸಕರು ಕನ್ನಡ ಭಾಷೆಯ ಅಭಿಮಾನ, ಗಾಂಭೀರ್ಯತೆ ಮತ್ತು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು, ರಾಜ್ಯಪಾಲರಿಗೆ ಹಿಂದಿಯಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದು, ಅವರು ಕರ್ನಾಟಕದಲ್ಲಿ ಹಿಂದಿ ಮಾತಾಡಕೂಡದು ಎಂದು ನಾಗರಾಜ್ ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಹಿಂದಿ ಭಾಷೆ ಬಳಸಲೇಬಾರದು, ರೇಲ್ವೇ ಇಲಾಖೆಯಲ್ಲಿ ಹಿಂದಿ ಬಳಸಬಾರದು, ಬ್ಯಾಂಕ್ ಗಳಲ್ಲಿ ಆ ಭಾಷೆಯನ್ನು ಬಳಸಬಾರದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂದಿ ಪರ ಒಲವು ತೋರಿದರೆ, ಕರ್ನಾಟಕದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.

ಇದನ್ನೂ ಓದಿ:   Ajay Devgan: ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ‘ಹಿಂದಿಯೇ ನಮ್ಮ ರಾಷ್ಟ್ರಭಾಷೆ’ ಎಂದ ಅಜಯ್ ದೇವಗನ್; ನೆಟ್ಟಿಗರಿಂದ ಕ್ಲಾಸ್

Published on: Apr 29, 2022 11:19 PM