ಹುಬ್ಬಳ್ಳಿ ಗಲಭೆ ಅರೋಪಿಗಳಿಗೆ ಜಮೀರ್ ಸಹಾಯ ಮಾಡಿದ್ದರೆ ಅದು ಸರಿಯಲ್ಲ: ಮೊಹಮ್ಮದ್ ನಲಪಾಡ್

ಹುಬ್ಬಳ್ಳಿ ಗಲಭೆ ಅರೋಪಿಗಳಿಗೆ ಜಮೀರ್ ಸಹಾಯ ಮಾಡಿದ್ದರೆ ಅದು ಸರಿಯಲ್ಲ: ಮೊಹಮ್ಮದ್ ನಲಪಾಡ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 29, 2022 | 9:09 PM

ಅವರು ಹೇಗಾದರೂ ಮಾಡಲಿ ಸರಿ ಅಂತ ನನಗೆ ಅನಿಸುತ್ತಿಲ್ಲ. ಈ ವಿಷಯದಲ್ಲಿ ನಾನು ಅವರ ಜೊತೆ ನಿಂತುಕೊಳ್ಳುವುದಿಲ್ಲ, ನಾನೇದರೂ ಸಹಾಯ ಮಾಡಿದ್ದರೆ ಪ್ರಶ್ನೆಯನ್ನು ನನಗೆ ಕೇಳಬಹುದಿತ್ತು ಎಂದು ನಲಪಾಡ್ ಹೇಳಿದರು.

Dharwad: ಜಮೀರ್ ಅಹ್ಮದ್ (Zameer Ahmed) ನಿಸ್ಸಂದೇಹವಾಗಿ ತಮ್ಮ ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಯಾಕೆ ಅಂತ ನಿಮಗೆ ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹುಬ್ಬಳ್ಳಿ ಗಲಭೆ (Hubballi Riots) ಅರೋಪಿಗಳ ಕುಟುಂಬಗಳಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಆಹಾರ ಸಾಮಗ್ರಿಗಳ ಪೊಟ್ಟಣ ಮತ್ತು ಧನ ಸಹಾಯ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಹೌದಾ ಇದು ಸರಿಯಾ ಅಂತ ಧಾರವಾಡದಲ್ಲಿ ಯುವ ಕಾಂಗ್ರೆಸ್ ಕರ್ನಾಟಕ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Nalapad) ಅವರಿಗೆ ಪತ್ರಕರ್ತರು ಧಾರವಾಡದಲ್ಲಿ ಕೇಳಿದಾಹ ಗಲಿಬಿಲಿಗೊಂಡ ಅವರು ಅದರ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ ಅಂತ ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸಿದರು. ಆದರೆ ಪತ್ರಕರ್ತರು ಬಿಡಲಿಲ್ಲ.

ಪುನಃ ಅದೇ ಪ್ರಶ್ನೆಯನ್ನು ಕೇಳಿದಾಗ ಜಮೀರ್ ಆಹ್ಮದ್ ಅವರು ವೈಯಕ್ತಿಕ ಸ್ತರದಲ್ಲಿ ಮಾಡುತ್ತಿರಬಹುದು, ಪಕ್ಷದ ಬ್ಯಾನರ್ ಅಡಿ ಮಾಡುತ್ತಿಲ್ಲ ಎಂದರು. ಅವರು ಹೇಗಾದರೂ ಮಾಡಲಿ ಸರಿ ಅಂತ ನನಗೆ ಅನಿಸುತ್ತಿಲ್ಲ. ಈ ವಿಷಯದಲ್ಲಿ ನಾನು ಅವರ ಜೊತೆ ನಿಂತುಕೊಳ್ಳುವುದಿಲ್ಲ, ನಾನೇದರೂ ಸಹಾಯ ಮಾಡಿದ್ದರೆ ಪ್ರಶ್ನೆಯನ್ನು ನನಗೆ ಕೇಳಬಹುದಿತ್ತು ಎಂದು ನಲಪಾಡ್ ಹೇಳಿದರು.

ಅದನ್ನೇ ನಾವು ಹೇಳಿದ್ದು. ಜಮೀರ್ ಅವರಿಗಿಂತ 20-25 ಚಿಕ್ಕವರಾಗಿರುವ ನಾಯಕರು ಸಹ ಅವರ ಜೊತೆ ನಿಂತುಕೊಳ್ಳುವುದಿಲ್ಲ ಅಂತ ಹೇಳುತ್ತಿದ್ದಾರೆ. ಇದನ್ನು ಜಮೀರ ಅರ್ಥಮಾಡಿಕೊಳ್ಳಬೇಕು. ಅವರ ನೆಚ್ಚಿನ ನಾಯಕ ಸಿದ್ದರಾಮಯ್ಯನವರಿಗೆ ವಿಷಯ ಗೊತ್ತಾಗಿ ಕ್ಲಾಸ್ ತೆಗೆದುಕೊಂಡಿರಲೂಬಹುದು. ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಬಡ ಜನರಿಗೆ ಸಹಾಯ ಮಾಡುತ್ತಾರೆ. ಜಮೀರ್ ಸಹಾಯ ಮಾಡಲು ಬೇರೆ ಬಡ ಕುಟುಂಬಗಳನ್ನು ಅರಿಸಿಕೊಂಡಿದ್ದರೆ ಚೆನ್ನಾಗಿತ್ತು.

ಇದನ್ನೂ ಓದಿ:   ಸಮಾಜದ ಲೀಡರ್ ಆಗಿ ಜಮೀರ್ ಅಹ್ಮದ್ ಸಮಾಜಘಾತುಕ ಶಕ್ತಿಗಳಿಗೆ ನೆರವಾಗುತ್ತಿರುವುದು ಖಂಡನೀಯ: ಆರಗ ಜ್ಞಾನೇಂದ್ರ