ಸಂಯುಕ್ತಾ ವಿರುದ್ದ ಸ್ಪರ್ಧೆ?; ವೀಣಾ ಕಾಶಪ್ಪನವರ್ ಶಾಕಿಂಗ್​ ರಿಯಾಕ್ಷನ್​

ಸಂಯುಕ್ತಾ ವಿರುದ್ದ ಸ್ಪರ್ಧೆ?; ವೀಣಾ ಕಾಶಪ್ಪನವರ್ ಶಾಕಿಂಗ್​ ರಿಯಾಕ್ಷನ್​

ಕಿರಣ್ ಹನುಮಂತ್​ ಮಾದಾರ್
|

Updated on: Apr 06, 2024 | 9:42 PM

ಬಾಗಲಕೋಟೆ(Bagalkot) ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ವಿಚಾರ, ‘ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ, ಯುಗಾದಿ ಬಳಿಕ ಅಂತಿಮ ನಿರ್ಧಾರ ಹೇಳುತ್ತೇನೆ ಎಂದು ವೀಣಾ ಕಾಶಪ್ಪನವರ್‌ (Veena Kashappanavar )ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ಬೆಂಬಲಿಗರ ಜೊತೆ ಸಭೆ ಬಳಿಕ ಮಾತನಾಡಿದ ಅವರು, ‘ಕೆಲವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಹೇಳಿದ್ದಾರೆ ಎಂದರು.

ಬಾಗಲಕೋಟೆ, ಏ.06: ಬಾಗಲಕೋಟೆ(Bagalkot) ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ವಿಚಾರ, ‘ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ, ಯುಗಾದಿ ಬಳಿಕ ಅಂತಿಮ ನಿರ್ಧಾರ ಹೇಳುತ್ತೇನೆ ಎಂದು ವೀಣಾ ಕಾಶಪ್ಪನವರ್‌ (Veena Kashappanavar )ಸ್ಪಷ್ಟಪಡಿಸಿದರು. ಬಾಗಲಕೋಟೆಯಲ್ಲಿ ಬೆಂಬಲಿಗರ ಜೊತೆ ಸಭೆ ಬಳಿಕ ಮಾತನಾಡಿದ ಅವರು, ‘ಕೆಲವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಹೇಳಿದ್ದಾರೆ. ಕೆಲವರು ಸ್ಥಾನಮಾನ ನೀಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಇನ್ನೂ ಕೆಲ ಬೆಂಬಲಿಗರು ತಟಸ್ಥರಾಗಿ ಉಳಿಯುವಂತೆ ಹೇಳುತ್ತಿದ್ದಾರೆ. ಈ ಹಿನ್ನಲೆ ಅವರವರ ಭಾಗದಲ್ಲಿ ಸರ್ವೆ ಮಾಡಿಸುವಂತೆ ಬೆಂಬಲಿಗರಿಗೆ ಸೂಚಿಸಿದ್ದೇನೆ.  ಸರ್ವೆ ವರದಿ ನೋಡಿ ಯುಗಾದಿ ಬಳಿಕ ಮುಂದಿನ ತೀರ್ಮಾನ ತಿಳಿಸುತ್ತೇನೆ. ಜೊತೆಗೆ ಶಿವಾನಂದ ಪಾಟೀಲ್ ಹಾಗೂ ಸಂಯುಕ್ತಾ ಮನೆಗೆ ಬಂದ್ರೆ ಕೂರಿಸಿ ಮಾತನಾಡುವೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸುತ್ತೇನೆ. ಬಳಿಕ ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ